ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ, ಹನಿ ನೀರಿಗಾಗಿ ನೆಲದ ಮೇಲೆ ತೆವಳುತ್ತಾ ಸಾಗಿದ ದಿವ್ಯಾಂಗ ಮಹಿಳೆ!

ಛತ್ತೀಸ್‌ಘಡ: ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಘೋಷಣೆಗಳ ನಡುವೆಯೇ, ಮೂಲಭೂತ ಸೌಕರ್ಯಗಳ ಕೊರತೆಯಿಂದ ದಿವ್ಯಾಂಗ ಮಹಿಳೆಯೊಬ್ಬಳು ನೀರಿಗಾಗಿ ಹರಸಾಹಸ ಪಡುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಛತ್ತೀಸ್‌ಗಢದ ಬಸ್ತಾರ್ ಬ್ಲಾಕ್‌ನ ಪಿವ್ಲಾವಂಡ್ ಜಾಮ್‌ಗುಡಾ ಎಂಬಲ್ಲಿ ಈ ಘಟನೆ ನಡೆದಿದೆ. ದಿವ್ಯಾಂಗ ಮಹಿಳೆಯೊಬ್ಬರು ಕುಡಿಯುವ ನೀರನ್ನು ತರಲು ಕಾಲಿಲ್ಲದೆ ನೆಲದ ಮೇಲೆ ತೆವಳುತ್ತಾ (ಘಸಿತಾ) ಹೋಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಕೆಯ ಪ್ರತಿ ಹೆಜ್ಜೆಯ ನೋವು ಇಡೀ ಆಡಳಿತ ವ್ಯವಸ್ಥೆಯ ನೈಜ ಸ್ಥಿತಿಯನ್ನು ಬಯಲು ಮಾಡುತ್ತಿದೆ.

ಛತ್ತೀಸ್‌ಗಢ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಯ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ಇದು ಅಮಾನವೀಯ ಸರ್ಕಾರದ ವೈಫಲ್ಯದ ಕನ್ನಡಿ. ಸುಶಾಸನ ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ಈ ದಿವ್ಯಾಂಗ ಮಹಿಳೆಯ ನೋವು ಕಾಣುತ್ತಿಲ್ಲವೇ?" ಎಂದು ಪ್ರಶ್ನಿಸಿದೆ. ಕೈಯಲ್ಲಿ ಒಂದು ಪಾತ್ರೆ ಹಿಡಿದು, ನೀರಿಗಾಗಿ ಮಣ್ಣಿನ ಹಾದಿಯಲ್ಲಿ ಮಹಿಳೆ ತೆವಳುತ್ತಾ ಸಾಗುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಕಂಬನಿ ಮಿಡಿಯುತ್ತಿದ್ದಾರೆ. ಸರ್ಕಾರಗಳು ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಮೊದಲು, ಇಂತಹ ಅಸಹಾಯಕರಿಗೆ ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯ ಒದಗಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

29/04/2026 10:00 pm

Cinque Terre

18.63 K

Cinque Terre

2

ಸಂಬಂಧಿತ ಸುದ್ದಿ