ಬಿಸಿಲು ನಾಡು ವಿಜಯಪುರದಲ್ಲಿ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ತಡೆದು ಕೊಳ್ಳೋಕೆ ಆಗಲ್ಲ. ಅಂತಹದರಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಸವಾರರು ಬಿಸಿಲಿನಲ್ಲಿ ನಿಲ್ಲೋದು ಅಂದ್ರೆ ಸಾಕ ಸಾಕಾಗಿ ಹೋಗುತ್ತೆ. ಸವಾರರಿಗೆ ಬಿಸಿಲಿನ ತಾಪದಿಂದ ಮುಕ್ತಿ ಕಲ್ಪಿಸೋಕೆ ಮಹಾನಗರ ಪಾಲಿಕೆ ನೆರಳಿನ ಭಾಗ್ಯ ಕಲ್ಪಿಸಿದೆ.
ಹೌದು..!
ಪ್ರತಿ ವರ್ಷ ಬೇಸಿಗೆ ಬಂದ್ರೆ ಸಾಕು ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳು ನೆರಳಿನ ಟೆಂಟ್ ಹಾಕಿಸಿರುತ್ತಾರೆ. ನೆರಳಿನ ಟೆಂಟ್‌ನಿಂದಾಗಿ ಸವಾರರು ನಿಟ್ಟುಸಿರು ಬಿಡುವಂತಾಗಿದ್ದು.
ನಗರದ ಬಸ್ ನಿಲ್ದಾಣ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ 2 ನೆರಳಿನ ಟೆಂಟ್, ಬಸವೇಶ್ವರ ವೃತ್ತದಲ್ಲಿ 3 ಟೆಂಟ್, ಗಾಂಧಿ ಚೌಕ್ ವೃತ್ತದಲ್ಲಿ 2 ಟೆಂಟ್ ಹಾಗೂ ಸೊಲ್ಲಾಪುರ ರಸ್ತೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಂಪರ್ಕಿಸೋ ವೃತ್ತದಲ್ಲಿ 2 ಟೆಂಟ್, ಕೋರ್ಟ್ ಸರ್ಕಲ್ ಹಾಗೂ ವಜ್ರ ಹನುಮಾನ್ ನಗರ ಹೀಗೆ ಒಟ್ಟು ನಗರದ 6 ಕಡೆಗಳಲ್ಲಿ ನೆರಳಿನ ಟೆಂಟ್ ಹಾಕಲಾಗಿದೆ. ಮಾರ್ಚ್ ತಿಂಗಳಿಂದ ಜೂನ್ ವರೆಗೆ ಬೇಸಿಗೆ ಕಾಲದಲ್ಲಿ ಪ್ರತಿ ವರ್ಷ ನೆರಳಿನ ಟೆಂಟ್ ಹಾಕಲಾಗುತ್ತದೆ.
ನೆರಳಿನ ಟೆಂಟ್ ಹಾಕೋಕೆ ಬರೋಬ್ಬರಿ 12 ಲಕ್ಷಕ್ಕೆ ಟೆಂಡರ್ ಕೊಡಲಾಗಿದೆ.
ಹೀಗೆ ಪ್ರತಿ ವರ್ಷ ಟೆಂಡರ್ ಕೊಡದೇ ನೆರಳು ಕಲ್ಪಿಸುವುದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಖರೀದಿಸಿ, ಪ್ರತಿ ವರ್ಷ ಬೇಸಿಗೆಯಲ್ಲಿ ಮಹಾನಗರ ಪಾಲಿಕೆಯಿಂದಲೇ ಟೆಂಟ್ ಹಾಕಿದ್ರೆ, ಪ್ರತಿ ವರ್ಷ ಟೆಂಡರ್ ಕೊಡುವ ಹಣ ಉಳಿಯಲಿದೆ. ಆದ್ರೆ ಮಹಾನಗರ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ನೆರಳಿನ ಟೆಂಟ್ ಟೆಂಡರ್ ನೆಪದಲ್ಲಿ ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಇನ್ನು ಕೇವಲ 6 ಕಡೆಗಳಲ್ಲಿ ನೆರಳಿನ ಟೆಂಟ್ ಹಾಕಲಾಗಿದೆ. ನಗರದ ಇಟಗಿ ಪೆಟ್ರೋಲ್ ಬಂಕ್ ಬಳಿ ಸಿಗ್ನಲ್ ನಲ್ಲಿ ಹಾಗೂ ಮನಗೂಳಿ ಅಗಸಿ ಬಳಿಯ ಸಿಗ್ನಲ್ ಸೇರಿದಂತೆ ಅಗತ್ಯವಿದ್ದಲ್ಲಿ ನೆರಳಿನ ಟೆಂಟ್ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
30/04/2026 04:01 pm
LOADING...