ಯಲ್ಲಾಪುರ: ವಿಜಯಪುರದಿಂದ ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಲಾರಿಯು ತಾಲೂಕಿನ ಚವತ್ತಿ ಸಮೀಪ ಪಲ್ಟಿಯಾದ ಘಟನೆ ನಡೆದಿದೆ.
ವಿಜಯಪುರದಿಂದ ಹೊರಟಿದ್ದ ಲಾರಿಯು ಯಲ್ಲಾಪುರ ಮಾರ್ಗವಾಗಿ ಸಾಗುತ್ತಿದ್ದು, ಚವತ್ತಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿನಲ್ಲಿ ಪಲ್ಟಿಯಾದ ರಭಸಕ್ಕೆ ಚಾಲಕನು ಲಾರಿಯ ಅಡಿಯಲ್ಲಿ ಸಿಲುಕಿಕೊಂಡು ನೋವಿನಲ್ಲಿ ನರಳುತ್ತಿದ್ದನು.
ಇದನ್ನು ಕಂಡ ಸ್ಥಳೀಯರು, ಪೊಲೀಸರ ನೆರವಿನೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ ಲಾರಿ ಅಡಿಯಲ್ಲಿ ಸಿಲುಕಿದ್ದ ಚಾಲಕನನ್ನು ಹೊರತೆಗೆದರು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
Kshetra Samachara
01/05/2026 03:45 pm
LOADING...