ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಎಂ ಕೆ ನಾಯ್ಕ್ ತಂಡ ಮೇಲುಗೈ

ಸಿದ್ದಾಪುರ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಿದ್ದಾಪುರ ತಾಲೂಕಾ ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಎಂ.ಕೆ.ನಾಯ್ಕ ಕಡಕೇರಿ ನೇತ್ರತ್ವದ ತಂಡ ಮೇಲುಗೈ ಸಾಧಿಸಿದೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು 454 ಮತದಾರರ ಪೈಕಿ 412 ಜನ ಶಿಕ್ಷಕರು ಮತ ಚಲಾಯಿಸಿದ್ದಾರೆ. ಎಂ‌.ಕೆ.ನಾಯ್ಕ ಕಡಕೇರಿ ಅವರು 250 ಮತ ಪಡೆದು ಗೆಲುವು ಸಾಧಿಸಿದರೆ ಅವರ ತಂಡದಿಂದ ಸ್ಪರ್ಧಿಸಿದ್ದ ಮಂಜುನಾಥ ನಾಯ್ಕ 215, ಜಿ.ಜಿ.ಹೆಗಡೆ 203, ಮಹಿಳಾ ಮೀಸಲು ಕ್ಷೇತ್ರದ ಸುಧಾಬಾಯಿ ರಾಯ್ಕರ್ 223, ರೀಟಾ ಡಿಸೋಜಾ 217 ಹಾಗೂ ದಿವ್ಯಾ ನಾಯ್ಕ 215 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಈ ಹಿಂದಿನ ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿದ್ದ ಸತೀಶ ಹೆಗಡೆ ನೇತ್ರತ್ವದ ತಂಡ ಮೂರು ಸ್ಥಾನ ಪಡೆದುಕೊಂಡಿದೆ. ಸತೀಶ ಹೆಗಡೆ 238, ಗುರುರಾಜ ನಾಯ್ಕ 211 ಹಾಗೂ ನಾಗರಾಜ ಮಡಿವಾಳ 206 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಗೆಲುವಿನ ನಂತರ ಎಂ‌.ಕೆ‌.ನಾಯ್ಕ ಮಾತನಾಡಿ, ತಾಲೂಕಿನ‌ ಸಮಸ್ತ ಶಿಕ್ಷಕರನ್ನು ಸಹ ಸಮಾನವಾಗಿ ನೋಡಿಕೊಳ್ಳಲಾಗುವುದು ಎಂದರು.

ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಚುನಾವಣೆ ನಡೆಸಿಕೊಟ್ಟರು.

Edited By : PublicNext Desk
Kshetra Samachara

Kshetra Samachara

04/05/2026 08:26 pm

Cinque Terre

5.04 K

Cinque Terre

0

ಸಂಬಂಧಿತ ಸುದ್ದಿ