ಬೆಂಗಳೂರು: ಈ ಮೊದಲು ಕಾರ್ಮಿಕರು ದಿನವೊಂದಕ್ಕೆ 14-18 ಗಂಟೆಗಳ ಕಾಲ ಕೆಲಸವನ್ನು ಮಾಡಬೇಕಿತ್ತು. ಇದು ಸರಿಯಾದುದಲ್ಲವೆಂದು ತಿಳಿದು 1886ರಲ್ಲಿ ಚಿಕಾಗೋದಲ್ಲಿ ಹೋರಾಟಗಳನ್ನು ನಡೆಸಲಾಯಿತು. ಪರಿಣಾಮ ಅಂದಿನಿಂದ ಪ್ರತಿಯೊಬ್ಬರಿಗೂ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಗೆ ಸೀಮಿತಗೊಳಿಸಲಾಯಿತು.
ಇನ್ನುಳಿದ ಎಂಟು ಗಂಟೆ ವಿಶ್ರಾಂತಿಗೆ ಮತ್ತು ಎಂಟು ಗಂಟೆ ಮನರಂಜನೆಗೆಂದು ನಿಗದಿಗೊಳಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ವಿಶ್ವ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕಾರ್ಮಿಕರಿಗೆ ಶುಭ ಕೋರಿದರು. ಡಿಸಿಎಂ ಡಿಕೆಶಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
PublicNext
01/05/2026 09:11 pm
LOADING...