ಸಿದ್ದಾಪುರ : ದನಕರುಗಳ ಮೈ ತೊಳೆಯಲು ಡ್ಯಾಮ್ ಗೆ ಹೋದ ವೇಳೆಯಲ್ಲಿ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಸಮೀಪದ ಹುಸೂರ್ ಡ್ಯಾಮ್ ನಲ್ಲಿ ನಡೆದಿದೆ.ರವಿಕಿರಣ ಸುರೇಶ ನಾಯ್ಕ್ ಅಂಬಳಿಕೆ (24 )ಮೃತ ಯುವಕ. ಈತನು ಶುಕ್ರವಾರ ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ತಾವು ಸಾಕಿದ ದನಕರುಗಳ ಮೈ ತೊಳೆಯಲು ಹುಸೂರ್ ಡ್ಯಾಮ್ ಗೆ ಹೋದಾಗ ದನದ ಕುತ್ತಿಗೆಯಲ್ಲಿದ್ದ ಹಗ್ಗ ಈತನ ಕಾಲಿಗೆ ಸಿಲುಕಿ ದನವು ನೀರಿನಲ್ಲಿ ಹೋದಾಗ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
01/05/2026 11:28 pm
LOADING...