ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರೇವಾಡ ಗ್ರಾಮದ ಬಸವಣ್ಣ ದೇವರ ಮಹಾರಥೋತ್ಸವ

ಧಾರವಾಡ: ಅಗ್ನಿಹುಣ್ಣಿಮೆಯ ಹಬ್ಬದ ಪ್ರಯುಕ್ತ ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ದಿನ ಜರುಗಿದ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಭಕ್ತಾದಿಗಳ ಹರ್ಷೋದ್ಗಾರದ ಮಧ್ಯೆ ಅದ್ದೂರಿಯಾಗಿ ಜರುಗಿತು.

ಪ್ರಧಾನ ಅರ್ಚಕ ಬಸವರಾಜ ಪೂಜಾರ್ ವರ್ಷದ ಆಗು-ಹೋಗುಗಳ ಕುರಿತು ಕಾರ್ಣಿಕ ನುಡಿದಿದ್ದು, ಗುಡುಗು ಮಿಂಚು ಬಾಳೈತ್ರಿಪೋ... ಮಳೆ-ಬೆಳೆ ಸಂಪೈತ್ರಿಪೋ... ಹವಳ-ಮುತ್ತು ಉದರತಾವ್ರಿಪೋ...ಮನೆ ಮನೆಯೊಳಗ ಜಗಳ ಅಕ್ಕಾವ್ರಿಪೋ... ರೈತರು ಎಲ್ಲರೂ ಕೂಡಿ ಚೆಂದಾಗಿ ಜಾತ್ರೆ ಮಾಡ್ರಿಪೋ... ಎಂದು ದೈವದ ಕಾರ್ಣಿಕ ಭಕ್ತರ ಹರ್ಷೋದ್ಗಾರಕ್ಕೆ ಕಾರಣವಾಯಿತು.

ಅಧಿಕ ಸಂಖ್ಯೆಯಲ್ಲಿ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ ಭಕ್ತರು ಬಸವಣ್ಣ ದೇವರ ಮಹಾರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬಿಹಣ್ಣು, ಹೂವು ಎಸೆದು ಭಕ್ತಿ ಸೇವೆ ಸಮರ್ಪಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/05/2026 11:57 am

Cinque Terre

39.82 K

Cinque Terre

0

ಸಂಬಂಧಿತ ಸುದ್ದಿ