ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಮರ್ಷಿಯಲ್ ಗ್ಯಾಸ್ ಅಭಾವ, ಹೊಟೇಲ್ ಮಾಲೀಕರ ಪರದಾಟ

ಹುಬ್ಬಳ್ಳಿ: ಇರಾನ್ ಇಸ್ರೇಲ್ ಯುದ್ಧ ಭೀತಿಯಿಂದ ಗ್ಯಾಸ್ ಅಭಾವ ಹೆಚ್ಚಾಗಿದೆ. ಕಮರ್ಷಿಯಲ್ ಸಿಲಿಂಡರ್ ಬುಕ್ ಮಾಡಿದ್ದೂ ಕೂಡ ಹೊಟೇಲ್‌ಗಳಿಗೆ ಸಿಲಿಂಡರ್ ಸಿಗುತ್ತಿಲ್ಲವೆಂದು ಹೊಟೇಲ್ ಮಾಲೀಕರು ಪರದಾಡುತ್ತಿದ್ದಾರೆ.

ಹೌದು,,, ಹುಬ್ಬಳ್ಳಿಯ ಹಲವಾರು ಹೊಟೇಲ್‌ ಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಬುಕ್ ಮಾಡಿದ್ರೂ ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲವಂತೆ, ಸಣ್ಣಪುಟ್ಟ ಹೊಟೇಲ್‌ಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲವೊಂದಿಷ್ಟು ಹೊಟೇಲ್‌ಗಳಲ್ಲಿ ಅಡುಗೆ ಕಡಿಮೆ ಮಾಡುತ್ತಿದ್ದಾರೆ. ಅಷ್ಟೇ ಅಲ್ದೆ ಐಟಮ್ಸ್ ಕೂಡ ಕಡಿಮೆ ಮಾಡಿದ್ದಾರೆ. ಗ್ಯಾಸ್ ಅಭಾವದಿಂದ ಹೊಟೇಲ್ ಮಾಲೀಕರು ಎಷ್ಟೊಂದು ತೊಂದ್ರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಅವರಿಂದಲೇ ಕೇಳಿ.

ಸರ್ಕಾರ, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು. ಹೊಟೇಲ್‌ಗಳನ್ನ ನಂಬಿ ಅದೆಷ್ಟೋ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಕೂಡಲೇ ಸರಿಯಾದ ಸಮಯಕ್ಕೆ ಸಿಲಿಂಡರ್ ಸಿಗುವಂತೆ ಸರ್ಕಾರ ನಿಗಾ ವಹಿಸಬೇಕು.

ಕ್ಯಾಮೆರಾ ಪರ್ಸನ್ ಗಜಾನನ ಹೂಗಾರ ಜೊತೆ ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Somashekar
Kshetra Samachara

Kshetra Samachara

02/05/2026 03:29 pm

Cinque Terre

9.08 K

Cinque Terre

1

ಸಂಬಂಧಿತ ಸುದ್ದಿ