ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೇತನ್ ಅಹಿಂಸಾ ಗಡಿಪಾರು ಮಾಡುವಂತೆ ಕನ್ನಡಪರ ಸಂಘಟನೆಗಳ ಆಗ್ರಹ

ಬೆಂಗಳೂರು:ಡಾ.ರಾಜ್ ಕುಮಾರ್ ಸಮಾಧಿ ವಿಚಾರ ಚೇತನ್ ಅಹಿಂಸಾ ಹೇಳಿಕೆ ಹಿನ್ನಲೆ ಚೇತನ್ ಅಹಿಂಸಾ ಗಡಿಪಾರು ಮಾಡುವಂತೆ ಕನ್ನಡಪರ ಸಂಘಟನೆಗಳ ಆಗ್ರಹಿಸಿದ್ದಾರೆ.ರಾಜ್ಯಾದ್ಯಂತ ಚೇತನ್ ವಿರುದ್ಧ ಪ್ರತಿಭಟಿಸಲು ಕನ್ನಡ ಪರ ಸಂಘಟನೆಗಳು ಪ್ಲಾನ್ ನಡೆಸಿದೆ.ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಪ್ರತಿಭಟನೆಗೆ ಕದಂಬ ಸೈನ್ಯ ಸಂಘಟನೆ ಸಿದ್ದತೆ ನಡೆಸಿದ್ದು,ದೇವನಹಳ್ಳಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.ನಟ ಚೇತನ್ ಅಹಿಂಸಾ ಕನ್ನಡಿಗರಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು.ಡಾ.ರಾಜ್ ಕುಮಾರ್ ಸ್ಮಾರಕ ಕುಟುಂಬದ ಆಸ್ತಿ ಅಲ್ಲ,ರಾಜ್ಯ ಸರ್ಕಾರದ ವಾರ್ತಾ ಇಲಾಖೆ ಕಂಠೀರವ ಸ್ಟುಡಿಯೋಗೆ ಸೇರಿದ್ದು,ಈ ಎಲ್ಲಾ ವಿಚಾರವಾಗಿ ಕನಿಷ್ಠ ಜ್ಞಾನವೂ ಇಲ್ಲದೆ ಚೇತನ್ ಅಹಿಂಸಾ ಮಾತನಾಡ್ತಿದ್ದಾರೆ,ಕನ್ನಡಿಗರ ಭಾವನೆಯನ್ನ ಕೆರಳಿಸಿರುವ ಚೇತನ್ ವಿರುದ್ಧ ಕ್ರಮ ಆಗಬೇಕು,ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೌನ ವಹಿಸುವುದು ಸರಿ ಅಲ್ಲ ಎಂದು ಚೇತನ್ ಅಹಿಂಸಾ ವಿರು

#ದೇವನಹಳ್ಳಿ

ಬೆಂಗಳೂರು: ನಟ ಚೇತನ್ ಅಹಿಂಸಾ ಗಡಿಪಾರು ಮಾಡುವಂತೆ ಕನ್ನಡಪರ ಸಂಘಟನೆಗಳ ಆಗ್ರಹ

​ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ಅವರ ಸಮಾಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ಅಹಿಂಸಾ ಅವರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಈ ವಿಚಾರವಾಗಿ ಚೇತನ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸಂಘಟನೆಗಳು ಸಿದ್ಧತೆ ನಡೆಸಿವೆ.

ಚೇತನ್ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲು 'ಕದಂಬ ಸೈನ್ಯ' ಸಂಘಟನೆ ಪ್ಲಾನ್ ಮಾಡಿದೆ. ದೇವನಹಳ್ಳಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕನ್ನಡ ಪರ ಸಂಘಟನೆಗಳ ನಾಯಕರು, ಚೇತನ್ ಅಹಿಂಸಾ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

​ ಡಾ.ರಾಜ್ ಕುಮಾರ್ ಸ್ಮಾರಕವು ಒಂದು ಕುಟುಂಬದ ಖಾಸಗಿ ಆಸ್ತಿಯಲ್ಲ. ಅದು ರಾಜ್ಯ ಸರ್ಕಾರದ ವಾರ್ತಾ ಇಲಾಖೆ ಹಾಗೂ ಕಂಠೀರವ ಸ್ಟುಡಿಯೋಗೆ ಸೇರಿದ್ದು ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಚೇತನ್ ಮಾತನಾಡುತ್ತಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಚೇತನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಮೌನ ವಹಿಸುವುದು ಸರಿಯಲ್ಲ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

02/05/2026 03:30 pm

Cinque Terre

3.51 K

Cinque Terre

0

ಸಂಬಂಧಿತ ಸುದ್ದಿ