ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೆಟ್ರೋಲ್ ಬಾಂಬ್ ರೀತಿ ಸ್ಫೋಟಿಸಿ ವಿಡಿಯೋ ಮಾಡಿದ್ದ ಬಿಗ್ ಬಾಸ್ ರಜತ್ ವಿರುದ್ಧ ದಾಖಲಾಯ್ತು ಎಫ್‌ಐಆರ್

ಬೆಂಗಳೂರು: ಈ ಹಿಂದೆ ರೀಲ್ಸ್ ಹುಚ್ಚಿಗೆ ಬಿದ್ದು ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ರಜತ್ ಮೇಲೆ ಅದೇ ರೀತಿಯ ರೀಲ್ಸ್ ನಿಂದ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಈಗ ಇದೇ ರೀಲ್ಸ್ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಸದ್ದು ಮಾಡಿದ್ದ ರಜತ್ ವಿರುದ್ಧ ಈಗ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಗ್ಗಲೀಪುರ ಠಾಣವ್ಯಾಪ್ತಿಯ ವಡೇರಹಳ್ಳಿ ರಸ್ತೆಯಲ್ಲಿ ನಡೆದ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತು ಅಂಡ್ ಟೀಮ್ ತ ಸೇರಿಕೊಂಡು ಸಿನಿಮೀಯ ಶೈಲಿಯಲ್ಲಿ ರೀಲ್ಸ್ ಮಾಡಿದ್ದಾರೆ. ಪ್ಲಾಸ್ಟಿಕ್ ಕವರ್‌ಗಳಲ್ಲಿ ಪೆಟ್ರೋಲ್ ತುಂಬಿಸಿ, ಸಾರ್ವಜನಿಕ ರಸ್ತೆಯ ಮಧ್ಯದಲ್ಲೇ ಪೆಟ್ರೋಲ್ ಬಾಂಬ್ ರೀತಿ ಸ್ಫೋಟಿಸಿ ಬೆಂಕಿಯ ಜ್ವಾಲೆಯನ್ನು ಸೃಷ್ಟಿಸಿದ್ದಾರೆ. ಈ ದೃಶ್ಯಕ್ಕೆ ಕೆಜಿಎಫ್ ಸಿನಿಮಾದ ವೈಲೆನ್ಸ್ ಡೈಲಾಗ್ ಸೇರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಲಾಗಿತ್ತು.

ಈ ಘಟನೆ ಏಪ್ರಿಲ್ 24ರಂದು ರಾತ್ರಿ 10ರಿಂದ 11 ಗಂಟೆಯ ಸುಮಾರಿಗೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕಗ್ಗಲೀಪುರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಡೆಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಬೆಂಕಿಯ ಜ್ವಾಲೆಯಿಂದ ಸಿಮೆಂಟ್ ರಸ್ತೆಯು ಕಪ್ಪಾಗಿ ಸಾರ್ವಜನಿಕ ಆಸ್ತಿಗೆ ನಷ್ಟವಾಗಿರುವುದು ಕಂಡುಬಂದಿದೆ.

ಕಾನೂನು ಕ್ರಮದ ವಿವರ:

ರಜತ್ ಮತ್ತು ತಂಡದ ವಿರುದ್ಧ ಈ ಕೆಳಗಿನ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.

BNS 287, 292: ನಿರ್ಲಕ್ಷ್ಯತನದ ವರ್ತನೆ ಮತ್ತು ಸಾರ್ವಜನಿಕ ಉಪದ್ರವ.

IMV Act 177, 194D: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ಸಂಚಾರಿ ನಿಯಮ ಉಲ್ಲಂಘನೆ.

PDPP Act 1984: ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ ಆರೋಪ. ಈ ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಾಗಿದೆ.

ಸದ್ಯಕ್ಕೆ ಕಗ್ಗಲೀಪುರ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತಂದು, ಸಮಾಜಕ್ಕೆ ತಪ್ಪು ಸಂದೇಶ ನೀಡುವ ಇಂತಹ ರೀಲ್ಸ್ ವಿರುದ್ಧ ಪೊಲೀಸರು ಈಗ ಕೆಂಗಣ್ಣು ಬೀರಿದ್ದಾರೆ.

ಕೇವಲ ಲೈಕ್ಸ್ ಮತ್ತು ಕಾಮೆಂಟ್ಸ್‌ಗಳಿಗಾಗಿ ಅಪಾಯಕಾರಿ ಕೃತ್ಯಗಳನ್ನು ಮಾಡುವುದು ಎಷ್ಟು ಸರಿ? ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ ಸದ್ಯ ರಜತ್‌ಗೆ ನೋಟೀಸ್ ನೀಡಿ ಕಗ್ಗಲೀಪುರ ಪೊಲೀಸ್ರು ವಿಚಾರಣೆ ನಡೆಸಲಿದ್ದಾರೆ.

Edited By : Shivu K
PublicNext

PublicNext

29/04/2026 10:28 pm

Cinque Terre

11.99 K

Cinque Terre

0

ಸಂಬಂಧಿತ ಸುದ್ದಿ