ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ನಾಳೆ ಬೆಳಿಗ್ಗೆ 7ರಿಂದ 11ಗಂಟೆಯವರೆಗೆ "ಮೋತಿ" ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕುರಿತು ಡೀಟೇಲ್ಸ್ ಇಲ್ಲಿದೆ.
ಮಕ್ಕಳಿಗೆ ಪೇಂಟಿಂಗ್ ಚಟುವಟಿಕೆ ಆಯೋಜನೆ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಸಾರ್ವಜನಿಕರು, ಶ್ವಾನ ಪ್ರಿಯರು, ಸಂಘ ಸಂಸ್ಥೆಗಳು, ಎನ್.ಜಿ.ಓ ಗಳು ಸಮುದಾಯ ಶ್ವಾನಗಳ ದತ್ತು ಪಡೆದುಕೊಳ್ಳಲು ಉತ್ತೇಜಿಸುವ ಸಲುವಾಗಿ ಹಾಗೂ ಸಹಾನುಭೂತಿ ಮತ್ತು ಜವಾಬ್ದಾರಿಯುತ ನಗರ ಸಹಜೀವನವನ್ನು ಉತ್ತೇಜಿಸುವ ಉಪಕ್ರಮದ ಭಾಗವಾಗಿ "ಮೋತಿ" ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ" (MOTI) – Movement of Trust & Inclusion ಎಂಬ ವಿಶಿಷ್ಟ ಸಹಜೀವನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು, ಎನ್.ಜಿ.ಓ ಗಳು, ಮಕ್ಕಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೇಂದ್ರ ನಗರ ಪಾಲಿಕೆ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲಸಿಕೆ ಹಾಗೂ ಕಿಟ್ ವಿತರಣೆ
ಸಮುದಾಯದ ಶ್ವಾನಗಳನ್ನು ದತ್ತು ಪಡೆದುಕೊಳ್ಳುವ ಸಂದರ್ಭದಲ್ಲಿ ಅಗತ್ಯ ಲಸಿಕೆಗಳನ್ನು ನೀಡಿ, ಶ್ವಾನಗಳಿಗೆ ಆಹಾರ ಕುತ್ತಿಗೆ ಪಟ್ಟಿ, ಚೈನ್ ಒಳಗೊಂಡ ಕಿಟ್ ಒಂದನ್ನು ನೀಡಲಾಗುವುದು.
"ಮೋತಿ" ಕಾರ್ಯಕ್ರಮದಲ್ಲಿ ಕೈಗೊಳ್ಳುವ ಪ್ರಮುಖ ಚಟುವಟಿಕೆಗಳ ವಿವರ
* ಪ್ರೀತಿಯ ಮನೆಯನ್ನು ಹುಡುಕುತ್ತಿರುವ ಸಮುದಾಯದ ಶ್ವಾನಗಳ (Indie Dogs) ದತ್ತು ಸ್ವೀಕಾರ ಅಭಿಯಾನ
* ಸಹಾನುಭೂತಿ ಮತ್ತು ಸಹಜೀವನವನ್ನು ಉತ್ತೇಜಿಸಲು (Dogathon) ಡಾಗ್ ಥಾನ್ ಸಂಕೇತಾತ್ಮಕ ನಡಿಗೆ ಆಯೋಜಿಸಿದೆ.
* ವಾರ್ಡ್ ಮಟ್ಟದ ನಾಗರಿಕರ ಭಾಗವಹಿಸಲು Leaf of Change ಉಪಕ್ರಮದಡಿ ಸ್ವಯಂಸೇವಕರ ನೋಂದಣಿ
* ಮಕ್ಕಳಿಂದ ಪೇಂಟಿಂಗ್ ಚಟುವಟಿಕೆ – “Paint with Puppies” ಮತ್ತು ಸಂವಹನಾತ್ಮಕ ಚಟುವಟಿಕೆಗಳ ಆಯೋಜಿಸಲಾಗಿದೆ.
* ಸಹಾನುಭೂತಿ ಮತ್ತು ಸಹಜೀವನ ಕುರಿತ ಕವನ, ಕಥನ ಮತ್ತು ಕಲಾತ್ಮಕ ಅಭಿವ್ಯಕ್ತಿಗಳಿಗೆ ಅವಕಾಶ.
* ದತ್ತಕ ಸ್ವೀಕಾರ, ಶಸ್ತ್ರಚಿಕಿತ್ಸೆ (ಸ್ಟೆರಿಲೈಸೇಶನ್), ಜವಾಬ್ದಾರಿಯುತ ಆಹಾರ ಪೂರೈಕೆ ಮತ್ತು ಸಮುದಾಯ ಭಾಗವಹಿಸುವಿಕೆ ಕುರಿತ ಜಾಗೃತಿ ಮಳಿಗೆಗಳ ಸ್ಥಾಪನೆ.
* QR (ಕ್ಯೂ.ಆರ್) ಕೋಡ್ ಆಧಾರಿತ ಸ್ವಯಂಸೇವಕರ ಮತ್ತು ನಾಗರಿಕರ ನೋಂದಣಿಗೆ ಅವಕಾಶ
* ಪ್ರಾಣಿ ಕಲ್ಯಾಣ ಹೋರಾಟಗಾರರು ಮತ್ತು ಸಮುದಾಯ ಸ್ವಯಂಸೇವಕರಿಗೆ ಗೌರವ ಸಲ್ಲಿಸಲಾಗುವುದು.
PublicNext
02/05/2026 05:59 pm