ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾರಿ ಅಪ್ಪ ಅಂತ ಡೆತ್ ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆ

ಬೆಂಗಳೂರು: ಸಾರಿ ಅಪ್ಪ ಅಂತ ಡೆತ್ ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಭೈರೇಗೌಡನಹಳ್ಳಿಯಲ್ಲಿ ನಡೆದಿದೆ.ಸ್ನೇಹಿತರ ಜೊತೆ ತಿರುಗಾಡಬೇಡ ಎಂದು ಪೋಷಕರು ಬೈದರು ಎಂಬ ವಿಚಾರಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾಳೆ.ಎಸೆಸೆಲ್ಸಿಯಲ್ಲಿ 83% ಉತ್ತಮ ಫಲಿತಾಂಶ ಪಡೆದಿದ್ದ ವಿದ್ಯಾರ್ಥಿನಿ ಸಂಧ್ಯಾ (17) ಆತ್ಮಹತ್ಯೆಗೆ ಶರಣಾದ ಬಾಲಕಿ,ಮಗಳನ್ನು ಎಂಬಿಬಿಎಸ್ ವ್ಯಾಸಂಗ ಮಾಡಿಸಬೇಕೆಂದು ಪೋಷಕರು ಅಂದುಕೊಂಡಿದ್ದರು.ರಾಘವೇಂದ್ರ, ಜ್ಯೋತಿ ದಂಪತಿಯ ಮಗಳು ಸಂಧ್ಯಾ,ವಿದ್ಯಾಭ್ಯಾಸಕ್ಕಾಗಿ ತನ್ನ ಅಕ್ಕ ಶೈಲಜಾ ಮನೆಗೆ ತಂದೆ ರಾಘವೇಂದ್ರ ಕಳಿಸಿದ್ದರು.

3 ವರ್ಷದಿಂದ ಅತ್ತೆ ಭಾವನಾ ಮನೆಯಲ್ಲಿ ಸಂಧ್ಯಾ ಇದ್ದಳು.ನಿನ್ನೆ ಅಜ್ಜಿಗೆ ಹುಷಾರಿಲ್ಲ ಎಂದು ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದರು.ಆಸ್ಪತ್ರೆಯಿಂದ ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಡೆತ್ ನೋಟ್ನಲ್ಲಿ ಸಾರಿ ಅಪ್ಪ ಎಂದು ಬರೆದಿಟ್ಟು ಸಂಧ್ಯಾ ನೇಣಿಗೆ ಶರಣಾಗಿದ್ದಾಳೆ.ಘಟನೆ ಸಂಬಂಧ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

02/05/2026 04:05 pm

Cinque Terre

2.95 K

Cinque Terre

1

ಸಂಬಂಧಿತ ಸುದ್ದಿ