ಹೈದರಾಬಾದ್: ಐಪಿಎಲ್ ಅಂಗಳದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಹೆನ್ರಿಚ್ ಕ್ಲಾಸನ್ ಈಗ ಮೈದಾನದ ಹೊರಗೆ ತಮ್ಮ ಸರಳತೆಯ ಮೂಲಕ ಸುದ್ದಿಯಲ್ಲಿದ್ದಾರೆ. ಐಪಿಎಲ್ ಮತ್ತು ವಿಶ್ವದ ವಿವಿಧ ಲೀಗ್‌ಗಳಿಂದ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಕ್ಲಾಸನ್, ಹೈದರಾಬಾದ್‌ನಲ್ಲಿ ಸಾಮಾನ್ಯ ನಾಗರಿಕನಂತೆ ಆಟೋ ರಿಕ್ಷಾದಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸದ್ಯ ಐಪಿಎಲ್ ಪಂದ್ಯಗಳಿಗಾಗಿ ಹೈದರಾಬಾದ್‌ನಲ್ಲಿರುವ ಕ್ಲಾಸನ್, ತಮ್ಮ ಪತ್ನಿ ಮತ್ತು ಮಗಳೊಂದಿಗೆ ನಗರ ಸುತ್ತಲು ಹೊರಟಿದ್ದರು. ಈ ವೇಳೆ ಐಷಾರಾಮಿ ಕಾರುಗಳನ್ನು ಬಿಟ್ಟು, ಆಟೋ ರಿಕ್ಷಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮಗಳು ಮತ್ತು ಪತ್ನಿಯೊಂದಿಗೆ ಆಟೋದಲ್ಲಿ ಕುಳಿತಿರುವ ಕ್ಲಾಸನ್ ಅವರ ಫೋಟೋ ನೋಡಿ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ನಿಜವಾದ ಸಂಸ್ಕೃತಿ ಮತ್ತು ಸರಳತೆ . ಭಾರತದಲ್ಲಿ ಯಾರಾದರೂ ತಿಂಗಳಿಗೆ 10 ಲಕ್ಷ ರೂಪಾಯಿ ಸಂಪಾದಿಸಿದರೆ, ಅವರು ಸಮಾಜದಲ್ಲಿ ತಮ್ಮ ಗೌರವ ಅಥವಾ ಸ್ಟೇಟಸ್ ಕಡಿಮೆಯಾಗುತ್ತದೆ ಎಂಬ ಭಯದಿಂದ ಎಂದಿಗೂ ಆಟೋದಲ್ಲಿ ಕುಳಿತುಕೊಳ್ಳುವುದಿಲ್ಲ! ಆದರೆ ವರ್ಷಕ್ಕೆ 40 ಕೋಟಿ ಗಳಿಸುವ ಕ್ಲಾಸನ್ ಯಾವುದೇ ಹಮ್ಮಿಲ್ಲದೆ ಆಟೋ ಏರಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
PublicNext
02/05/2026 10:41 pm
LOADING...