ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಾಲು ಕೊಳೆತು ನರಳುತ್ತಿದ್ದ ಭಿಕ್ಷುಕನ ರಕ್ಷಣೆ

ಬೆಳಗಾವಿ: ಕಾಲು ಕೊಳೆತು ರಸ್ತೆ ಬದಿ ಬಿದ್ದು ನರಳಾಡುತ್ತಿದ್ದ ಭಿಕ್ಷುಕನನ್ನು ರಕ್ಷಿಸಿ ಯುವಕರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಬೆಳಗಾವಿ ನಗರದ ಅರಣ್ಯ ಇಲಾಖೆಯ ಕಚೇರಿ ಮುಂದೆ ಕಾಲಿಗೆ ಹುಳ ಬಿದ್ದು ಅರ್ಧ ಕಾಲಿನ ಪಾದ ಕಟ್ ಆಗಿ ಭಿಕ್ಷುಕ ನರಳುತ್ತಿದ್ದ. ಈ ವಿಷಯ ಗಮನಕ್ಕೆ ಬರುತ್ತಿದೆ ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆ ಹಾಗೂ ಹಿಂದೂ ಭೋವಿ ವಡ್ಡರ ಸಮಾಜದ ಕಾರ್ಯಕರ್ತರಾದ ರಾಹುಲ್ ಮಾರುತಿ ಹುಬ್ಬಳ್ಳಿ ಅವರು, ಸ್ಥಳಕ್ಕೆ ಆಗಮಿಸಿ ಆ್ಯಂಬುಲೆನ್ಸ್ ಮೂಲಕ ರೋಗಿಯನ್ನು ಬಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ರಾಹುಲ್ ಅವರ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

03/05/2026 11:59 am

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ