ಬೆಂಗಳೂರು: ನಗರದ ನಕ್ಷೆಯಲ್ಲಿ ಕೆಆರ್ ಪುರ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರಿದ್ದು, ಶನಿವಾರ ತಡರಾತ್ರಿ ಮುಸ್ಲಿಂ ಬಾಂಧವರಿಂದ ದ್ರೌಪದಮ್ಮ ಕರಗಕ್ಕೆ ದರ್ಗಾದಲ್ಲಿ ವಿಶೇಷ ಪೂಜೆ ಜರುಗಿದೆ.
ಕೆ ಟಿ ರಾಜಕುಮಾರ್ ನೇತೃತ್ವದ 8ನೇ ವರ್ಷದ ಶ್ರೀ ಬಾವಿ ಗಂಗಮ್ಮ ದೇವಿಯ ಮಹೋತ್ಸವದ ಅಂಗವಾಗಿ ಆಯೋಜಿಸಿದ ದ್ರೌಪದಮ್ಮ ಕರಗ ಸರ್ಕಾರಿ ಕಾಲೇಜು ರಸ್ತೆಯಲ್ಲಿರುವ ದುರ್ಗಾ ಹಜ್ರತ್ ರೋಷನ್ ಷಾವಲಿ ದರ್ಗಾಗೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನು ಸಲ್ಲಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.ದರ್ಗಾ ಮುಂದೆ ಬಂದ ದ್ರೌಪದಮ್ಮ ಕರಗಗೆ ಮುಸಲ್ಮಾನ್ ಬಾಂಧವರು ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದ್ದಾರೆ.
PublicNext
03/05/2026 01:33 pm
LOADING...