ಮಂಗಳೂರು: ಅಂಚೆ ಇಲಾಖೆಯಲ್ಲಿ ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೊಂಚಾಡಿ ಅಂಚೆ ಕಚೇರಿಯ ಎಂಟಿಎಸ್ ಸಿಬ್ಬಂದಿ ಮಾಧವ ಆಚಾರ್ಯ ಅವರು ವೃತ್ತಿ ಜೀವನದಿಂದ ನಿವೃತ್ತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಯೆಯ್ಯಾಡಿಯ ಡಿಎಸ್‌ಐಎ ಅಡಿಟೋರಿಯಂ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಪಶ್ಚಿಮ ವಿಭಾಗದ ಅಂಚೆ ಅಧೀಕ್ಷಕ ಕೃಷ್ಣ ರಾಜ ವಿಠ್ಠಲ ಭಟ್ಟ ಆಗಮಿಸಿ, ನಿವೃತ್ತರನ್ನು ಸನ್ಮಾನಿಸಿ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಅಂಚೆ ಪಾಲಕಿ ಲೋನಾ, ನಿವೃತ್ತ ಅಂಚೆ ಪಾಲಕಿ ವಿಜಯಲಕ್ಷ್ಮಿ, ಹಂಪನಕಟ್ಟೆ ಅಂಚೆ ಪಾಲಕ ಸೂರ್ಯ ನಾರಾಯಣ ರಾವ್, ವಿದ್ಯಾ ಕಿಶೋರ್ ಬಾಗಲೋಡಿ ಸೇರಿದಂತೆ ಇಲಾಖೆಯ ಸಹೋದ್ಯೋಗಿಗಳು, ಊರಿನ ಗಣ್ಯರು ಹಾಗೂ ಹಿತೈಷಿಗಳು ಭಾಗವಹಿಸಿ ಮಾಧವ ಆಚಾರ್ಯ ಅವರಿಗೆ ಸುಖಕರ ನಿವೃತ್ತ ಜೀವನದ ಹಾರೈಕೆಗಳನ್ನು ಸಲ್ಲಿಸಿದರು.
Kshetra Samachara
03/05/2026 09:28 pm
LOADING...