ಮೂಡುಬಿದಿರೆ: ಬೆಳುವಾಯಿ ಗ್ರಾಮದ ಬಂಗ್ಲಗುಡ್ಡೆ ಪ್ರದೇಶದಲ್ಲಿರುವ ಹಾಲೋ ಬ್ಲಾಕ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ (37) ಎಂಬ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಏಪ್ರಿಲ್ 25ರಂದು ಬೆಳಿಗ್ಗೆ ಕೆಲಸಕ್ಕೆ ತೆರಳಿದ ಜಗದೀಶ್ ಅವರು ಸಂಜೆ ಸುಮಾರು 5:40 ಗಂಟೆಗೆ ಕೆಲಸ ಮುಗಿಸಿ ಫ್ಯಾಕ್ಟರಿಯಿಂದ ಹೊರಟಿದ್ದಾರೆ. ಬಳಿಕ ಬೆಳುವಾಯಿಯಿಂದ ಮೂಡುಬಿದಿರೆ ಕಡೆಗೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಿದ ಅವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿದ್ದಾರೆ.ನಾಪತ್ತೆಯಾಗಿರುವ ಜಗದೀಶ್ ಅವರು 37 ವರ್ಷ ವಯಸ್ಸಿನವರಾಗಿದ್ದು, ಕಪ್ಪು ಕೂದಲು, ಬಿಳಿ ಮೈಬಣ್ಣ ಹಾಗೂ ಸಪೂರ ದೇಹ ಹೊಂದಿದ್ದಾರೆ.
ನಾಪತ್ತೆಯಾಗುವ ವೇಳೆ ನೀಲಿ ಜೀನ್ಸ್ ಪ್ಯಾಂಟ್ ಹಾಗೂ ತಿಳಿ ಹಸಿರು ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿದ್ದರು. ಇವರಿಗೆ ಕನ್ನಡ ಮತ್ತು ತುಳು ಭಾಷೆಗಳು ತಿಳಿದಿವೆ.ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ (ದೂ.ಸಂ.: 08258-236333) ಅಥವಾ ಸಮೀಪದ ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Kshetra Samachara
27/04/2026 12:23 pm
LOADING...