ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವೈಟ್‌ಡೌಸ್ ಮಾನವೀಯ ಕಾರ್ಯದಿಂದ ಮತ್ತೆ ಮೊದಲಿನಂತಾದ ಮಾನಸಿಕ ಅಸ್ವಸ್ಥ

ಮಂಗಳೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೋರ್ವನು ಮಂಗಳೂರಿನ ಮರೋಳಿಯ ವೈಟ್‌ಡೌಸ್ ಸಂಸ್ಥೆಯ ಮಾನವೀಯ ಸೇವೆಯಿಂದ ಮನೆ ತೊರೆದು ಎರಡು ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಿದ ಹೃದಯಸ್ಪರ್ಶಿ ಘಟನೆ ನಡೆದಿದೆ.

2024ರ ಜುಲೈ 14ರಂದು ಮರೋಳಿ ಕೆಇಬಿಯ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಸುಮಾರು 29 ವರ್ಷದ ಯುವಕನೊಬ್ಬ ಪತ್ತೆಯಾಗಿದ್ದನು. ಕೊರಿನ್ ರಕ್ಸಿನಾ ಅವರು ಈತನನ್ನು ತಮ್ಮ ವೈಟ್‌ಡೌಸ್ ಸಂಸ್ಥೆಗೆ ಕರೆತಂದು ಶುಶ್ರೂಷೆ ಮಾಡಿ ಔಷಧೋಪಚಾರ ಆರಂಭಿಸಿದ್ದಾರೆ. ಇದರಿಂದ ಕೊಂಚ ಚೇತರಿಸಿಕೊಂಡ ಈತ ತನ್ನ ಹೆಸರು ಖಾಸಿಂ, ಗೋರಖ್‌ಪುರ್ ಜಿಲ್ಲೆಯ ಪದ್ರೌನಾ ನನ್ನ ಊರು ಎಂಬ ಸುಳಿವು ನೀಡಿದ್ದಾನೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡ ಬಳಿಕ. ನಿಧಾನವಾಗಿ ಅವನ ನೆನಪುಗಳು ಮರಳಿ ಪತ್ನಿ ಮತ್ತು ಇಬ್ಬರು ಮಕ್ಕಳ ಬಗ್ಗೆ ಆತ ನಿರಂತರವಾಗಿ ನೆನಪು ಮಾಡಿ ಮಾತನಾಡುತ್ತಿದ್ದ. “ತನ್ನ ಮಕ್ಕಳಿಗಾಗಿ ತಾನು ಮರಳಿ ಮನೆಗೆ ಹೋಗಬೇಕು” ಎಂದು ಸದಾ ಹೇಳುತ್ತಿದ್ದ

ಆತನ ಈ ಕಾತರತೆಯನ್ನು ಗಮನಿಸಿ ವೈಟ್‌ಡೌಸ್ ಸಂಸ್ಥೆ ಆತ ನೀಡಿರುವ ಊರಿನ ಸುಳಿವಿನ ಮೇರೆಗೆ ಮನೆಮಂದಿಯನ್ನು ಪತ್ತೆಹಚ್ಚಲು ಆರಂಭಿಸಿತು. ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದರೂ ಸ್ಪಂದನೆ ಸಿಗಲಿಲ್ಲ. ಬಳಿಕ ಪೊಲೀಸ್ ಇಲಾಖೆ, ಕಮಿಷನರ್ ಕಚೇರಿ ಮತ್ತು ಎಸಿಪಿ ಮಟ್ಟದವರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ತಂದೆ-ತಾಯಿ ಹೆಸರುಗಳು ಹಾಗೂ ಸಹೋದರನ ಕುರಿತು ಮಾಹಿತಿ ನೀಡಿದರೂ ಸುಳಿವು ದೊರಕಲಿಲ್ಲ.

ನಂತರ ಸಮಾಜ ಕಾರ್ಯಕರ್ತರು, ವಿದ್ಯಾರ್ಥಿಗಳು

ಅಂತಿಮವಾಗಿ ವೈಟ್‌ಡೌಸ್ ಸಂಸ್ಥೆಯ ಇಬ್ಬರು ಮಹಿಳಾ ಸಿಬ್ಬಂದಿ ಉತ್ತರಪ್ರದೇಶಕ್ಕೆ ತೆರಳಿ ಹುಡುಕಲು ಮುಂದಾದರೂ, ರೈಲು ಟಿಕೆಟ್ ಲಭ್ಯವಾಗದಿದ್ದರಿಂದ ಆ ಯೋಜನೆ ಫಲಪ್ರದವಾಗಲಿಲ್ಲ.

ಆದರೆ ಖಾಸಿಂನ ಮಾನಸಿಕ ಸ್ಥಿತಿಗತಿ ಹಾಗೂ ಆತ ತನ್ನ ಊರಿಗೆ ಹೋಗುವ ರೈಲು ಹಾಗೂ ರಸ್ತೆ ಮಾರ್ಗದ ಬಗ್ಗೆ ನಿಖರವಾಗಿ ಹೇಳುವುದನ್ನು ಗಮನಿಸಿ ವೈಟ್‌ಡೌಸ್ ಸಂಸ್ಥೆ ಧೈರ್ಯಶಾಲಿ ನಿರ್ಧಾರ ತೆಗೆದುಕೊಂಡಿತು. ಆದ್ದರಿಂದ ಮುಂಬೈವರೆಗೆ ರೈಲು ಟಿಕೆಟ್ ಒದಗಿಸಿ, ಅಲ್ಲಿಂದ ಗೋರಖ್‌ಪುರ್ ಮೂಲಕ ಪದ್ರೌನಾಗೆ ಹೋಗುವ ಮಾರ್ಗದ ವಿವರಗಳನ್ನು ನೀಡಿ, ಆತನಿಗೆ ಪ್ರಯಾಣ ವೆಚ್ಚವನ್ನು ನೀಡಿ ಕಳುಹಿಸಲಾಯಿತು.

ಅದಾದ ಬಳಿಕ ನಡೆದದ್ದು ಅದ್ಭುತವೇ ಸರಿ.

ಖಾಸಿಂ ಸುರಕ್ಷಿತವಾಗಿ ಊರಿಗೆ ತಲುಪಿದ್ದು, ಆತನನ್ನು ನೋಡಿದ ಕುಟುಂಬ ಅಚ್ಚರಿ ಅನುಭವಿಸಿತು. ಪೋಷಕರು, ಸಹೋದರ, ಪತ್ನಿ ಹಾಗೂ ಮಕ್ಕಳು ಆತನನ್ನು ಕಂಡು ಸಂತೋಷಪಟ್ಟರು. ಇದೇ ಮೊದಲ ಬಾರಿಗೆ ವೈಟ್‌ಡೌಸ್ ಸಂಸ್ಥೆ ತಮ್ಮಲ್ಲಿ ಗುಣಮುಖರಾದ ರೋಗಿಗಳನ್ನು ಮತ್ತೆ ಕುಟುಂಬದೊಂದಿಗೆ ಸೇರಿಸುವಲ್ಲಿ ಇಂತಹದೊಂದು ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗಿದೆ.

Edited By :
PublicNext

PublicNext

21/04/2026 08:44 am

Cinque Terre

22.99 K

Cinque Terre

0

ಸಂಬಂಧಿತ ಸುದ್ದಿ