ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ-ಬಿಸಿಲುಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

ಶಿರಸಿ: ಮೇ 5 ರಿಂದ ಮೇ 7 ರವರೆಗೆ ಶಿರಸಿ-ಬಿಸಿಲುಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ನಿಷೇಧಕ್ಕೆ ಕಾರಣ

ಮಂಗಳವಾರ ತಾಲೂಕಿನ ಬಿಸಿಲುಕೊಪ್ಪ, ಇಸಳೂರು, ದಾಸನಕೊಪ್ಪ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಮತ್ತು ರೈತ ಸಂಘಟನೆಯವರು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಹಾಯಕ ಆಯುಕ್ತರು, ತಾಲೂಕು ದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ತೀರ್ಮಾನವನ್ನು ಅಂತಿಮಗೊಳಿಸಲಾಗಿದೆ.

ಯಾವ ವಾಹನಗಳಿಗೆ ನಿಷೇಧ?

ಶಿರಸಿ-ಬಿಸಿಲುಕೊಪ್ಪ ಮಾರ್ಗದಲ್ಲಿ ಯಾವುದೇ ಭಾರಿ ಗಾತ್ರದ ವಾಹನಗಳು, ಲಾರಿ, ಟಿಪ್ಪರ್‌ಗಳು, ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಹಾಗೂ ಪ್ರವಾಸಿಗರ ಟೆಂಪೋ ಟ್ರಾವೆಲ್ಲರ್‌ಗಳ ಸಂಚಾರವನ್ನು ಮುಂದಿನ ಮೂರು ದಿನಗಳವರೆಗೆ (ಮೇ 05, 2026 ರಿಂದ ಮೇ 07, 2026 ರವರೆಗೆ) ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಭಾರೀ ವಾಹನಗಳ ಚಾಲಕರು ಮತ್ತು ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಮಳಗಿ – ದಾಸನಕೊಪ್ಪ – ಬನವಾಸಿ – ಶಿರಸಿ ಮಾರ್ಗವಾಗಿ ಸಂಚರಿಸಬೇಕು. ಅದೇ ರೀತಿ, ಹಾವೇರಿ ಕಡೆಯಿಂದ ಬರುವ ವಾಹನಗಳು ದಾಸನಕೊಪ್ಪ – ಬನವಾಸಿ – ಶಿರಸಿ ಮಾರ್ಗವನ್ನು ಬಳಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

05/05/2026 06:52 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ