ಶಿರಸಿ: ನಗರದ ಕೆಎಚ್‌ಬಿ ಕಾಲೋನಿ ಹೊಸ ಬಡಾವಣೆಯಲ್ಲಿ ವೈದ್ಯ ರಮೇಶ ಕಲ್ಗುಟಕರ್ ಅವರನ್ನು ಕೊಲೆ ಮಾಡಿರುವ ಘಟನೆ ಹಿನ್ನೆಲೆಯಲ್ಲಿ ಸಿಪಿಐ ಶಶಿಕಾಂತ್ ವರ್ಮಾ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ಆರೋಪಿಯನ್ನು ಕೊಲೆ ಮಾಡಿದ ಸ್ಥಳಕ್ಕೆ ಕರೆತಂದು ಮನೆಯ ಸ್ಥಳ ಮಹಜರು ಮಾಡಲಾಯಿತು.
ನಂತರ ಆರೋಪಿಗೆ ಕೊಲೆ ಮಾಡಲು ಬಳಸಿದ ಲಟ್ಟಣಿಗೆಯ ಕುರಿತು ಪೊಲೀಸರು ವಿಚಾರಿಸಿದಾಗ
ಆರೋಪಿಯು ಕೊಲೆಯಾದ ವೈದ್ಯರ ಮನೆಯಿಂದ ಸುಮಾರು 400 ರಿಂದ 500 ಮೀಟರ್ ದೂರದಲ್ಲಿರುವ ಗಿಡಗಂಟಿಗಳಿರುವ ರಸ್ತೆಯ ಪಕ್ಕದ ಪೊದೆಯಲ್ಲಿ ಲಟ್ಟಣಿಗೆಯನ್ನು ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದನು.
ಆರೋಪಿಯ ಮಾಹಿತಿಯನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ಮಾಡಿ ಲಟ್ಟಣಿಗೆಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡರು.
ನಂತರ ಹೆಚ್ಚಿನ ಮಾಹಿತಿ ಕಲೆ ಹಾಕಲು ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಠಾಣೆಗೆ ಕರೆದೊಯ್ಯಲಾಯಿತು.
ಈ ಕಾರ್ಯಾಚರಣೆಯಲ್ಲಿ ಮಾರ್ಕೆಟ್ ಯಾರ್ಡ್
ಪಿಎಸ್ಐ ಬಸವರಾಜ್ ಕನಶೆಟ್ಟಿ , ಕ್ರೈಂ ವಿಭಾಗದ ಪಿಎಸ್ಐ ರಾಜಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
PublicNext
20/04/2026 09:55 pm
LOADING...