ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಇಟಿ: ವಿವಿಧ ಅರ್ಹತಾ ಖಂಡಿಕೆಯ ಅಭ್ಯರ್ಥಿಗಳಿಗೆ ಮೇ 11ರಿಂದ ದಾಖಲೆ ಪರಿಶೀಲನೆ

ಬೆಂಗಳೂರು: ಪ್ರಸಕ್ತ ಸಾಲಿನ ಯುಜಿಸಿಇಟಿ ಅರ್ಜಿಯಲ್ಲಿ ಅರ್ಹತಾ ಖಂಡಿಕೆ ಎ1 ಬಿ1 ಬಿ, ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಓ (A1, B1, B, C, D, E, F, G, H, I, J, K, L, M, N and O) ಎಂದು ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಮೇ 11ರಿಂದ 22ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಇಲ್ಲಿನ‌ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ನಡೆಯುವ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳು ಬರುವ ಮುನ್ನ ವೆಬ್ ಸೈಟ್ ನಲ್ಲಿ ನೀಡಿರುವ ಲಿಂಕ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ಬರಬೇಕು. ಮೇ‌ 7ರಿಂದ ಸ್ಲಾಟ್ ಬುಕ್ ಲಿಂಕ್ ತೆರೆದುಕೊಳ್ಳಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳೇ ಬರಬೇಕು. ಅವರ ಪರವಾಗಿ ಬೇರೆಯವರು ಬರುವಂತಿಲ್ಲ. ಪರಿಶೀಲನೆ ವೇಳೆ ಸಲ್ಲಿಸಬೇಕಾದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಇಟಿ-2026 ಪ್ರವೇಶ ಪತ್ರ ಮತ್ತು ಅರ್ಜಿ, ಗುರುತಿನ ಚೀಟಿ (ಆಧಾರ್ ಕಾರ್ಡ್) 10 ಮತ್ತು 12ನೇ ತರಗತಿಯ ಅಂಕಪಟ್ಟಿ, ವ್ಯಾಸಂಗ ಪ್ರಮಾಣ ಪತ್ರ, ಪೋಷಕರ ಪ್ರಮಾಣ ಪತ್ರಗಳು, ಅರ್ಹತಾ ಖಂಡಿಕೆಗೆ ಅನುಗುಣವಾಗಿ ಅವಶ್ಯಕವಿರುವ ಇತರೆ ಎಲ್ಲ ಮೂಲ ದಾಖಲೆ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಅವರು ತಿಳಿಸಿದ್ದಾರೆ.

ಪರಿಶೀಲನೆಗೆ ಹಾಜರಾಗಿ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಮಾತ್ರ ಆನ್ ಲೈನ್ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಹಾಗೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ವೈ ಅರ್ಹತಾ ಖಂಡಿಕೆಯ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/05/2026 08:59 pm

Cinque Terre

840

Cinque Terre

0