ಬೆಂಗಳೂರು: ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಜೈಲಿನಲ್ಲಿ ಸಹಖೈದಿಗಳಿಂದ ತನಗೆ ನಿಂದನೆ, ಮೂದಲಿಕೆ, ಪ್ರಚೋದನೆ ಮತ್ತು ಬೆದರಿಕೆ ಎದುರಾಗುತ್ತಿದೆ. ತನ್ನ ಜೀವಿಸುವ ಹಕ್ಕನ್ನು ಕಸಿಯಲಾಗಿದೆ ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ದರ್ಶನ್ ಹೇಳಿಕೆಗಳಿಗೆ ಜೈಲಾಧಿಕಾರಿಗಳು ಠಕ್ಕರ್ ನೀಡಿದ್ದು, ಜೈಲಿನಲ್ಲಿ ದರ್ಶನ್‌ಗೆ ಸಹಖೈದಿಗಳಿಂದ ಯಾವುದೇ ಸಮಸ್ಯೆ ಇಲ್ಲ, ನಿಂದನೆ, ಮೂದಲಿಕೆ, ಪ್ರಚೋದನೆ ಅಥವಾ ಬೆದರಿಕೆ ಎದುರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದರ್ಶನ್‌ರನ್ನು ಸಹಖೈದಿಗಳೊಂದಿಗೆ ಸಂಪರ್ಕವಿಲ್ಲದಂತೆ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಜೈಲು ಇಲಾಖೆ ತಿಳಿಸಿದೆ.
ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಕಾರಾಗೃಹ ಇಲಾಖೆಯು ರಾಜ್ಯ ಗೃಹ ಇಲಾಖೆಗೆ ವರದಿ ಸಲ್ಲಿಸಲಿದೆ. ದರ್ಶನ್ ಇರುವ ಸೆಲ್‌ನ ವಿಡಿಯೋ, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಅವರಿಗೆ ಒದಗಿಸಲಾದ ಎಲ್ಲಾ ಸೌಲಭ್ಯಗಳ ಕುರಿತು ಸಮಗ್ರ ಸಾಕ್ಷ್ಯಗಳೊಂದಿಗೆ ವರದಿ ನೀಡಲು ಇಲಾಖೆ ಸಿದ್ಧತೆ ನಡೆಸಿದೆ.
ಇದೇ ವೇಳೆ, ದರ್ಶನ್‌ಗೆ ಕುಟುಂಬ ಸದಸ್ಯರ ವಿಶೇಷ ಸಂದರ್ಶನಕ್ಕೆ ಕಾರಾಗೃಹ ಇಲಾಖೆ ಕೇಳಿತ್ತು. ಇದಕ್ಕೆ ಉತ್ತರಿಸಿದ ದರ್ಶನ್, ತಮ್ಮ ವಕೀಲರನ್ನು ಕೇಳಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಜೈಲಿನ ನಿಯಮಗಳು ಹಾಗೂ ದರ್ಶನ್‌ಗೆ ನೀಡಿರುವ ಸವಲತ್ತುಗಳ ಬಗ್ಗೆ ಸಂಪೂರ್ಣ ವರದಿಯನ್ನು ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿದ್ದಾರೆ.
PublicNext
06/05/2026 09:57 am
LOADING...