ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಸ್‌ಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡ್ತಿದ್ದ ಆರೋಪಿಗಳು ಲಾಕ್

ಬೆಂಗಳೂರು: ಬಸ್ಸುಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡ್ತಿದ್ದ ಕುಪ್ಪಂ ಗ್ಯಾಂಗ್‌ನ್ನು ಹೊಸಕೋಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಳ್ಳತನಕ್ಕೆ ಮಕ್ಕಳನ್ನು ಖತರ್ನಾಕ್ ಕುಪ್ಪಂ ಗ್ಯಾಂಗ್ ಬಳಕೆ ಮಾಡ್ತಿದ್ದರು. ಬಸ್ಸಿನಲ್ಲಿ ಪ್ರಯಾಣ ಮಾಡಿ ಮಕ್ಕಳಿಗೆ ವಾಂತಿ ಬರುವ ನಾಟಕ ಕಳ್ಳರು ಮಾಡ್ತಿದ್ದರು. ಪ್ರಯಾಣಿಕ ಗಮನ ಬೇರೆಡೆ ಸೆಳೆದು ಖದೀಮರು ಆಭರಣಗಳನ್ನು ಕದಿಯುತ್ತಿದ್ದರು. ಇದೇ ರೀತಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ ವೃದ್ಧೆಯ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿದ್ದಾರೆ. ವೃದ್ಧೆ ಧರಿಸಿದ್ದ 74ಗ್ರಾಂ ಚಿನ್ನದ ಮಾಂಗಲ್ಯ‌ ಸರ ಕದ್ದು ಕಳ್ಳರು ಎಸ್ಕೇಪ್ ಆಗಿದ್ದರು.ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಎ1 ದಿವಾಕರ್‌ನನ್ನು ಬಂಧಿಸಿದ್ದು, ಉಳಿದ ಎ2 ಮೋನಿಷಾ, ಎ3 ಗಾಯಿತ್ರಿ, ಎ4 ಇಂದ್ರಾ ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ.

ಬಂಧಿತ ಆರೋಪಿಗಳಿಂದ 12 ಲಕ್ಷ ಮೌಲ್ಯದ ಚಿನ್ನಾಭರಣ, 3.50 ಲಕ್ಷ ನಗದು ವಶಕ್ಕೆ ಪಡೆಯಲಾಗಿದ್ದು,ಆರೋಪಿಗಳ ಹೆಡೆಮುರಿಕಟ್ಟಿ ಹೊಸಕೋಟೆ ಪೊಲೀಸರು ಜೈಲಿಗಟ್ಟಿದ್ದಾರೆ.ಪ್ರಕರಣ ಭೇದಿಸಿರುವ ಡಿವೈಎಸ್ಪಿ ಮಲ್ಲೇಶ್, ಇನ್ಸ್ಪೆಕ್ಟರ್ ಗೋವಿಂದ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಚಂದ್ರಕಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Edited By : Vinayak Patil
PublicNext

PublicNext

06/05/2026 11:36 am

Cinque Terre

6.38 K

Cinque Terre

0

ಸಂಬಂಧಿತ ಸುದ್ದಿ