ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 55 ಲಕ್ಷ ರೂ. ಮೌಲ್ಯದ 50 ಬೈಕ್‌ಗಳು ವಶ: ಕಳ್ಳರ ಜಾಲ ಭೇದಿಸಿದ ಪೊಲೀಸರು, ಮಾಲೀಕರಿಗೆ ನೆಮ್ಮದಿ!

ಬೆಂಗಳೂರು: ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ಬೈಕ್ ಕಳವು ಆರೋಪದಲ್ಲಿ ಬಂಧಿಸಲಾಗಿದ್ದ ಆರೋಪಿಗಳಿಂದ ಕಳುವಾಗಿದ್ದ ₹55ಲಕ್ಷ ಮೌಲ್ಯದ ವಿವಿಧ ಕಂಪನಿಗಳ 50 ಬೈಕ್‌ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಾದ ಮಾಲೂರಿನ ನರಸಿಂಹಮೂರ್ತಿ ಕೆ.ಎನ್ (46) ಆಂಧ್ರಪ್ರದೇಶದ ನಲ್ಲೂರು ಜಿಲ್ಲೆ ಅಮ್ಮವಾರಿಪಾಳ್ಯಂನ ನಿವಾಸಿ ಪ್ರಸಾದ್, ವಿವಿಧ ಕಂಪನಿಯ 50ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.ಅಲ್ಲದೆ, ಇವರ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಆರೋಪಿಗಳಿಂದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ 5, ಮಾಲೂರು 18, ಬಂಗಾರಪೇಟೆ 6, ಕಾಡಗೋಡಿ 5, ಕೋಲಾರ ನಗರ 1, ಬೇತಮಂಗಲ 1, ಗಲ್‌ಪೇಟೆ 1, ಕಾಟನ್ ಪೇಟೆ 1, ಇತರೆ ಪೊಲೀಸ್ ಠಾಣೆಗಳಲ್ಲಿ 12 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

Edited By : Vinayak Patil
PublicNext

PublicNext

06/05/2026 12:11 pm

Cinque Terre

5.64 K

Cinque Terre

0

ಸಂಬಂಧಿತ ಸುದ್ದಿ