ಬಾಲಿವುಡ್‌ನ ಸುಲ್ತಾನ್, ಭಾಯ್‌ಜಾನ್ ಸಲ್ಮಾನ್ ಖಾನ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಅಧಿಪತ್ಯ ನಡೆಸ್ತಿರೋ ಸಲ್ಮಾನ್, ಇದೀಗ ತಮ್ಮ ಸಿನಿಮಾಗಳ ಬಗ್ಗೆ ಇಡೀ ಇಂಡಸ್ಟ್ರಿಯೇ ಹುಬ್ಬೇರಿಸುವಂತಹ ಶಾಕಿಂಗ್ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. "ನಾನು ನನ್ನ ಇಡೀ ಲೈಫ್‌ನಲ್ಲಿ ಒಂದೇ ಒಂದು ಸಿನಿಮಾದ ಸ್ಕ್ರಿಪ್ಟ್ ಕೂಡ ಪೂರ್ತಿಯಾಗಿ ಓದಿಲ್ಲ!" ಅಂತ ಸಲ್ಮಾನ್ ಹೇಳಿದ್ದಾರೆ.
ಹೌದು, ನೀವು ಕೇಳ್ತಿರೋದು ನೂರಕ್ಕೆ ನೂರು ನಿಜ! ಇತ್ತೀಚೆಗೆ 'ವೆರೈಟಿ ಇಂಡಿಯಾ' ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ಸಲ್ಮಾನ್ ಖಾನ್, "ನಾನು ಕಥೆಗಳನ್ನು ಬರೆದಿದ್ದೇನೆಯೇ ವಿನಃ, ಯಾವತ್ತೂ ಕೂತು ಸ್ಕ್ರಿಪ್ಟ್ ಓದಿಲ್ಲ" ಎಂದಿದ್ದಾರೆ.
ಹಾಗಾದ್ರೆ ಸಲ್ಮಾನ್ ಸಿನಿಮಾಗಳನ್ನು ಹೇಗೆ ಒಪ್ಕೊಳ್ತಾರೆ?
ಡೈರೆಕ್ಟರ್ ಕಥೆ ಹೇಳುವಾಗ ಸಿನಿಮಾದ ಒಟ್ಟಾರೆ ಫೀಲ್ ಹೇಗಿದೆ, ಎಮೋಷನಲ್ ಕನೆಕ್ಟ್ ಎಷ್ಟಿದೆ ಮತ್ತು ಅದರಲ್ಲಿರೋ ಕಮರ್ಷಿಯಲ್ ಎಲಿಮೆಂಟ್ಸ್ ಏನು ಅನ್ನೋದನ್ನು ಮಾತ್ರ ಭಾಯ್‌ಜಾನ್ ನೋಡ್ತಾರಂತೆ.
ಪೇಜ್ ಬೈ ಪೇಜ್ ಸ್ಕ್ರಿಪ್ಟ್ ಓದೋದು ತಮಗೆ ಇಷ್ಟವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮದೇ ಆದ ಈ ವಿಶಿಷ್ಟ ಸ್ಟೈಲ್‌ನಿಂದಲೇ ಸಲ್ಮಾನ್ ಬಾಲಿವುಡ್‌ನಲ್ಲಿ ಸಾಲು ಸಾಲು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡುತ್ತಾ ಬಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಅವರ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಫ್ಯಾನ್ಸ್ ಇದನ್ನೇ 'ಪೀಕ್ ಸಲ್ಮಾನ್ ಎನರ್ಜಿ' ಅಂತ ಕೊಂಡಾಡ್ತಿದ್ದಾರೆ.
ಈ ಬಗ್ಗೆ ನೀವೇನಂತೀರಾ?
PublicNext
17/05/2026 10:02 am
LOADING...