ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇ 25 ರಿಂದ ಸ್ಟಾರ್ ಸುವರ್ಣದಲ್ಲಿ ಹಳ್ಳಿ ಪೈಲ್ವಾನನ ಪ್ರೇಮಕಾವ್ಯ - ಚೇತನ್ ಚಂದ್ರ ನಟನೆಯ 'ಮರ್ಯಾದೆ ರಾಮಣ್ಣ' ಆರಂಭ!

ಬೆಂಗಳೂರು : ಕನ್ನಡ ಕಿರುತೆರೆ ವೀಕ್ಷಕರಿಗೆ ಸದಾ ವಿನೂತನ ಹಾಗೂ ಕೌಟುಂಬಿಕ ಮನರಂಜನೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಸ್ಟಾರ್ ಸುವರ್ಣ ವಾಹಿನಿ, ಈಗ ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರುವ ‘ಮರ್ಯಾದೆ ರಾಮಣ್ಣ’ ಧಾರಾವಾಹಿಯನ್ನು ಹೊತ್ತು ತರುತ್ತಿದೆ. ಈ ಕಥೆಯ ನಾಯಕ ರಾಮಣ್ಣ ಅಖಾಡದಲ್ಲಿ ಅಜೇಯನಾಗಿರುವ ಪೈಲ್ವಾನ. ಆದರೆ ಅಮ್ಮ ಜಯಮ್ಮನ ಮಾತೇ ಈತನಿಗೆ ವೇದವಾಕ್ಯ. ತಾಯಿಯ ಮರ್ಯಾದೆಗಾಗಿ ಬ್ರಹ್ಮಚರ್ಯದ ಹಾದಿ ಹಿಡಿದಿರುವ ಈ ಹಳ್ಳಿ ಯುವಕನ ಬದುಕಿಗೆ, ನಗರದ ಮಾಡರ್ನ್ ಹುಡುಗಿ ಐಶ್ವರ್ಯಳ ಪ್ರವೇಶವಾಗುತ್ತದೆ.

ತನ್ನದೇ ಆದ ಕನಸುಗಳನ್ನು ಕಟ್ಟಿಕೊಂಡು ವಿದೇಶಕ್ಕೆ ಹಾರಲು ಸಜ್ಜಾಗಿರುವ ಐಶ್ವರ್ಯ ಮತ್ತು ಹಳ್ಳಿಯ ಸಂಸ್ಕೃತಿಯಲ್ಲಿ ಬೆಳೆದ ರಾಮಣ್ಣನ ನಡುವೆ ಪ್ರೀತಿ ಹೇಗೆ ಚಿಗುರೊಡೆಯುತ್ತದೆ? ಅಮ್ಮನ ಆಣೆಯನ್ನು ರಾಮಣ್ಣ ಹೇಗೆ ನಿಭಾಯಿಸುತ್ತಾನೆ? ಎಂಬ ಕುತೂಹಲಕಾರಿ ಸನ್ನಿವೇಶಗಳು ಈ ಧಾರಾವಾಹಿಯ ಜೀವಾಳವಾಗಿದೆ.

ದೀರ್ಘ ಗ್ಯಾಪ್‌ನ ನಂತರ ನಾಯಕನಾಗಿ ಚೇತನ್ ಚಂದ್ರ ಕಂಬ್ಯಾಕ್ ಮಾಡುತ್ತಿದ್ದು, ಅವರಿಗೆ ಜೀವಿತಾ ವಸಿಷ್ಠ ಜೋಡಿಯಾಗಿದ್ದಾರೆ. ವೀಣಾಸುಂದರ್, ಸುಂದರ್, ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್ ಸೇರಿದಂತೆ ಚಿತ್ರರಂಗದ ಪ್ರಮುಖ ಅನುಭವಿ ಕಲಾವಿದರು ಈ ಧಾರಾವಾಹಿಯ ತಾರಾಗಣದಲ್ಲಿದ್ದಾರೆ. ಇದೇ ಮೇ 25 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ಹಾಗೂ JioHotstar ನಲ್ಲಿ ಈ ಕೌಟುಂಬಿಕ ಡ್ರಾಮಾ ಪ್ರಸಾರವಾಗಲಿದೆ.

Edited By : Nirmala Aralikatti
PublicNext

PublicNext

21/05/2026 01:37 pm

Cinque Terre

9.8 K

Cinque Terre

0

ಸಂಬಂಧಿತ ಸುದ್ದಿ