ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾನ್ ಚಿತ್ರದಲ್ಲಿ ರೈತನ ಕಥೆಗೆ ಸಾಥ್ ನೀಡಿದ ಕಿರಣ್ ಶ್ರೀನಿವಾಸ್: ವಿಜಯ ರಾಘವೇಂದ್ರ ಜೊತೆ ಸ್ಪೆಷಲ್ ಜುಗಲ್‌ಬಂದಿ!

ಬೆಂಗಳೂರು: ಮಹಾನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಿರಣ್ ಶ್ರೀನಿವಾಸ್ ರೈತನ ಕಥೆಗೆ ಸಾಥ್ ನೀಡಿದ ಖ್ಯಾತ ನಟ

ಸದಭಿರುಚಿಯ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಹೆಮ್ಮೆಯ ನಿರ್ದೇಶಕ ಪಿ.ಸಿ. ಶೇಖರ್ ಆ್ಯಕ್ಷನ್ ಕಟ್ ಹೇಳುತ್ತಿರುವ, ಬಹುನಿರೀಕ್ಷಿತ ಮಹಾನ್ ಚಿತ್ರದ ತಾರಾಬಳಗಕ್ಕೆ ಮತ್ತೊಬ್ಬ ಪ್ರಭಾವಿ ನಟನ ಸೇರ್ಪಡೆಯಾಗಿದೆ. ಜನಪ್ರಿಯ ನಟ ವಿಜಯ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಖ್ಯಾತ ನಟ ಕಿರಣ್ ಶ್ರೀನಿವಾಸ್ ಬಣ್ಣ ಹಚ್ಚಿದ್ದಾರೆ.

ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಾಶ್ ಬುದ್ದೂರು ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ಇದು ನನ್ನ ವೃತ್ತಿಜೀವನದ ವಿಭಿನ್ನ ಪಾತ್ರ ಕಿರಣ್ ಶ್ರೀನಿವಾಸ್ ಮಹಾನ್ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ನಟ ಕಿರಣ್ ಶ್ರೀನಿವಾಸ್ ತೀವ್ರ ಸಂತಸ ವ್ಯಕ್ತಪಡಿಸಿದ್ದು, ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದಾರೆ.

ನಿರ್ದೇಶಕ ಪಿ.ಸಿ. ಶೇಖರ್ ಅವರ ಹಿಂದಿನ ಸಿನಿಮಾಗಳು ನನಗೆ ತುಂಬ ಇಷ್ಟವಾಗಿದ್ದವು. ಈಗ ಅವರ ನಿರ್ದೇಶನದಲ್ಲೇ ಒಂದು ಪ್ರಮುಖ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. 'ಮಹಾನ್' ಚಿತ್ರದಲ್ಲಿ ನಾನು ಈವರೆಗೂ ಮಾಡಿರದ, ಸಂಪೂರ್ಣ ವಿಭಿನ್ನವಾದ ಪಾತ್ರವೊಂದನ್ನು ಮಾಡಿದ್ದೇನೆ. ನಿರ್ದೇಶಕರು ಕಥೆ ಹೇಳಿದಾಗಲೇ ಈ ಪಾತ್ರ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಯಿತು. ಇದು ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಹ ಪಾತ್ರವಾಗುತ್ತದೆ ಎಂಬ ಭರವಸೆ ನನಗಿದೆ."

ವಿಜಯ ರಾಘವೇಂದ್ರ ಜೊತೆಗಿನ ಒಡನಾಟ ಮತ್ತು ತಾರಾಗಣದ ಅನುಭವ ಚಿತ್ರದ ಸಹನಟರು ಹಾಗೂ ತಂತ್ರಜ್ಞರ ಬಗ್ಗೆ ಮಾತನಾಡಿದ ಕಿರಣ್, ಹಳೆಯ ದಿನಗಳನ್ನು ನೆನಪಿಸಿಕೊಂಡರು.ವಿಜಯ ರಾಘವೇಂದ್ರ ಕೆಲವು ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರು ತೀರ್ಪುಗಾರರಾಗಿದ್ದ ರಿಯಾಲಿಟಿ ಶೋ ಒಂದರಲ್ಲಿ ನಾನು ನಿರೂಪಕನಾಗಿದ್ದೆ. ಆಗ ಅವರು ತೋರಿದ ಪ್ರೀತಿ, ಪ್ರೋತ್ಸಾಹ ಇಂದಿಗೂ ಹಸಿರಾಗಿದೆ. ಈಗ ಅವರ ಜೊತೆಯಲ್ಲೇ ಬೆಳ್ಳಿಪರದೆಯ ಮೇಲೆ ನಟಿಸಿರುವುದು ಅತ್ಯಂತ ಖುಷಿ ಕೊಟ್ಟಿದೆ.

ರಂಗಾಯಣ ರಘು ಸರ್ ಅವರ ಜೊತೆ ನಟಿಸುವಾಗ, ಅವರ ಅಭಿನಯದ ಶೈಲಿಯನ್ನು ನೋಡಿ ಸಾಕಷ್ಟು ವಿಷಯಗಳನ್ನು ಕಲಿತುಕೊಂಡೆ. ಸಹನಟಿಯರು ಮತ್ತು ನಿರ್ಮಾಪಕರು ರಾಧಿಕಾ ನಾರಾಯಣ್ ಹಾಗೂ ವರ್ಷ ಬೊಳ್ಳಮ್ಮ ಅವರ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. ಅಷ್ಟೇ ಅಲ್ಲದೆ, ಪ್ರಕಾಶ್ ಬುದ್ದೂರು ಅವರ ನಿರ್ಮಾಣದ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಹೆಮ್ಮೆಯಿದೆ.

ಮಹಾನ್ ಎಂದರೆ ರೈತ ಚಿತ್ರದ ಆಶಯದ ಬಗ್ಗೆ ಮಾತನಾಡುತ್ತಾ, ಈ ಚಿತ್ರದಲ್ಲಿ 'ಮಹಾನ್' ಎಂದರೆ ಬೇರಾರೂ ಅಲ್ಲ, ಅದು ನಮ್ಮ ದೇಶದ ಬೆನ್ನೆಲುಬಾದ ರೈತ. ಇಂತಹ ರೈತನ ಕುರಿತಾದ, ಸಾಮಾಜಿಕ ಕಾಳಜಿಯಿರುವ ಚಿತ್ರದಲ್ಲಿ ನಾನು ಒಂದು ಪ್ರಮುಖ ಭಾಗವಾಗಿರುವುದಕ್ಕೆ ಹೆಮ್ಮೆಯೆನಿಸುತ್ತದೆ .

ಎಂದು ಕಿರಣ್ ಶ್ರೀನಿವಾಸ್ ತಿಳಿಸಿದ್ದಾರೆ.ಚಿತ್ರದಲ್ಲಿ ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ರಂಗಾಯಣ ರಘು, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ದೊಡ್ಡ ತಾರಾಬಳಗವೇ ಮುಂಚೂಣಿಯಲ್ಲಿದೆ.

Edited By :
PublicNext

PublicNext

21/05/2026 11:18 am

Cinque Terre

15.09 K

Cinque Terre

0

ಸಂಬಂಧಿತ ಸುದ್ದಿ