ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಐಸಿರಿಯ ಸಂಭ್ರಮದ ಸಡಗರ - ಜುಗಲ್ ಬಂದಿ, ಬ್ಯಾಂಡ್ ಜನಮ ಜೊತೆಗೆ ಪ್ರಶಸ್ತಿ ಪ್ರದಾನ ಕಲರವ..!

ಹುಬ್ಬಳ್ಳಿ: ಐಬಿಎಂಆರ್ ಶಿಕ್ಷಣ ಸಂಸ್ಥೆಯ ಐಸಿರಿ ಸಂಭ್ರಮ ಮೂರು ದಿನವೂ ಅದ್ದೂರಿಯಾಗಿ ನಡೆದಿದ್ದು, ಕೊನೆಯ ದಿನವಾದ ಶನಿವಾರ ಹಲವಾರು ವೈವಿಧ್ಯಮಯ ಅನುಭವದಲ್ಲಿ ಸಂಪನ್ನಗೊಂಡಿದೆ. ನ್ಯಾಷನಲ್ ಜುಗಲ್ ಬಂದಿ, ದಿ ಬ್ಯಾಂಡ್ ಜನಮ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಅಷ್ಟಕ್ಕೂ ಐಬಿಎಂಆರ್ ಐಸಿರಿ ಸಂಭ್ರಮ ಹೇಗಿತ್ತು ಅಂತೀರಾ ತೋರಸ್ತಿವಿ ನೋಡಿ..

ಸುಮಾರು 26 ವರ್ಷಗಳ ಶೈಕ್ಷಣಿಕ ಸೇವೆಯನ್ನು ಪೂರೈಸಿದ ಐಬಿಎಂಆರ್ ಶಿಕ್ಷಣ ಸಂಸ್ಥೆಯು, ಪ್ರತಿವರ್ಷದಂತೆ ಈ ವರ್ಷವೂ, ಐಸಿರಿ ಸಂಭ್ರಮ ಆಯೋಜಿಸಿದ್ದು, ಮೂರುದಿನ ಕಾಲ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿದೆ. ಹೌದು.. ಮೂರನೇ ದಿನದ ಕಾರ್ಯಕ್ರಮದಲ್ಲಿ ರ್ಯಾಂಪ್ ವಾಕ್, ಫ್ಯಾಷನ್ ಶೋ, ಸೋಲೋ ಡ್ಯಾನ್ಸ್, ಸೋಲೋ ಸಾಂಗ್ ವಿಜೇತರಿಗೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಅಲ್ಲದೇ ಕಿಕ್ಕಿರಿದ ಜನದಟ್ಟಣೆಯಲ್ಲಿ ಮ್ಯೂಸಿಕಲ್ ಬ್ಯಾಂಡ್, ಜುಗಲ್ ಬಂದಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಇನ್ನೂ ಐಸಿರಿ ಸಂಭ್ರಮೋತ್ಸವದಲ್ಲಿ ಬಿಎ ವಿಭಾಗದ ಮ್ಯಾಗಜಿನ್ ಬಿಡುಗಡೆಯನ್ನು, ಡಾ.ಸಿ.ಎಚ್.ವಿ. ಪ್ರಸಾದ್, ಎಚ್.ವಿ.ಬೆಳಗಲಿ, ಇಗ್ನೇಶ್ ಸಾಕ್ರಿ, ಅಣ್ಣಪ್ಪ ಕೊರವರ ನೆರವೇರಿಸಿದರು. ಇದೇ ವೇಳೆ ಗಣ್ಯರಿಗೆ ಐಬಿಎಂಆರ್ ಆಡಳಿತ ಮಂಡಳಿಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಒಟ್ಟಿನಲ್ಲಿ ಮೂರು ದಿನಗಳ ಸಂಭ್ರಮ ಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ಅವಿಸ್ಮರಣೀಯ ರೀತಿಯಲ್ಲಿ ನಡೆದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐಬಿಎಂಆರ್ ಸಂಸ್ಥೆಯು ಈಗ ವಿದ್ಯಾರ್ಥಿಗಳ ಸಮ್ಮಿಲನದ ಸಮ್ಮೇಳನವಾಗಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/05/2026 04:47 pm

Cinque Terre

63.47 K

Cinque Terre

0

ಸಂಬಂಧಿತ ಸುದ್ದಿ