ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸತತ ಎರಡನೇ ಬಾರಿಗೆ ಕಪ್ ಗೆದ್ದ ಆರ್‌ಸಿಬಿ - ವಾಣಿಜ್ಯ ನಗರಿಯಲ್ಲಿ ಅಭಿಮಾನಿಗಳ ಸಂಭ್ರಮವೋ ಸಂಭ್ರಮ

ಹುಬ್ಬಳ್ಳಿ : ಐಪಿಎಲ್‌ ನಲ್ಲಿ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್ ಆಗುತ್ತಿದ್ದಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಭ್ರಮದ ಸಾಗರದಲ್ಲಿ ತೇಲಿತು. ಮಧ್ಯರಾತ್ರಿಯಲ್ಲೂ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು, ನಗರದ ಚನ್ನಮ್ಮ ವೃತ್ತದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

2026ರ ಐಪಿಎಲ್ ಟ್ರೋಫಿಯನ್ನು ಆರ್‌ಸಿಬಿ ತನ್ನದಾಗಿಸಿಕೊಳ್ಳುತ್ತಿದ್ದಂತೆ ಹುಬ್ಬಳ್ಳಿ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿತು. ಕೊನೆಯ ಕ್ಷಣದಲ್ಲಿ ವಿರಾಟ್ ಕೊಹ್ಲಿ ಸಿಕ್ಸರ್ ಸಿಡಿಸಿ ತಂಡದ ಗೆಲುವು ಖಚಿತವಾಗುತ್ತಿದ್ದಂತೆಯೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಶಿಳ್ಳೆ, ಚಪ್ಪಾಳೆ, ಕೇಕೆ ಮತ್ತು “ಆರ್‌ಸಿಬಿ... ಆರ್‌ಸಿಬಿ...” ಘೋಷಣೆಗಳೊಂದಿಗೆ ಇಡೀ ಪ್ರದೇಶ ಮೊಳಗಿತು. ಚೆನ್ನಮ್ಮ ಸರ್ಕಲ್ ಹಾಗೂ ಸಂಗೊಳ್ಳಿ ರಾಯಣ್ಣ ಸರ್ಕಲ್ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅಭಿಮಾನಿಗಳು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಎರಡನೇ ಬಾರಿ ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಆಕಾಶದೆತ್ತರಕ್ಕೆ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವವನ್ನು ಮತ್ತಷ್ಟು ರಂಗೇರಿಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/06/2026 10:54 am

Cinque Terre

49.91 K

Cinque Terre

1

ಸಂಬಂಧಿತ ಸುದ್ದಿ