ಹುಬ್ಬಳ್ಳಿ: ಇಂದು ಆರ್.ಸಿ.ಬಿ ಹಾಗೂ ಗುಜರಾತ್ ಟೈಟನ್ಸ್ ನಡುವೆ ಐಪಿಎಲ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ, ಆರ್ ಸಿಬಿ ಮತ್ತೆ ಎರಡನೇ ಸಲವೂ ಸಹ ವಿಜಯಶಾಲಿ ಆಗಲಿ ಎಂದು ವಿವಿಧ ಸಂಘಟನೆಗಳು ಇಂದು ಹಳೆ ಕೋರ್ಟ್ ಸರ್ಕಲ್ ಬಳಿಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದವು.
ಕರ್ನಾಟಕ ಚಾಲಕರ ಒಕ್ಕೂಟದ ಹುಬ್ಬಳ್ಳಿ ತಾಲೂಕು ಘಟಕ ಹಾಗೂ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಅಟೋ ಚಾಲಕರ ಮಾಲೀಕರ ಸಂಘದ ಒಕ್ಕೂಟ ಬ್ಯಾಟ್ ಬಾಲ್ ಹಿಡಿದ ಪೂಜೆ ಸಲ್ಲಿಸಿದ ಅಭಿಮಾನಿಗಳು, ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಳ್ಳಲು ಆರ್ಸಿಬಿ ಶುಭ ಹಾರೈಕೆ ಮಾಡಿ ಫೈನಲ್ ಪಂದ್ಯಕ್ಕೆ ಶುಭಕೋರಿದ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಹಲವಾರು ಸಂಘಟನೆ ಪ್ರಮುಖರು ಶುಭ ಹಾರಿಸಿದರು.
Kshetra Samachara
31/05/2026 06:26 pm
LOADING...