ಧಾರವಾಡ: ಐಪಿಎಲ್ ಫೈನಲ್ ಅಂದರೆ ಸಾಕು, ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಮುಗಿಲು ಮುಟ್ಟಿರುತ್ತದೆ. ಅದೇ ರೀತಿ ಧಾರವಾಡದಲ್ಲೂ ಐಪಿಎಲ್ ಫೈನಲ್ ಕ್ರೇಜ್ ಜೋರಾಗಿದ್ದು, ಕೆಸಿಡಿ ಕಾಲೇಜು ಆವರಣದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೋಸ್ಕರ ಕೆಜಿಪಿ ಫೌಂಡೇಶನ್ ವತಿಯಿಂದ ಬಿಗ್ LED ವಾಲ್ ಅಳವಡಿಸಿ ಅಭಿಮಾನಿಗಳಿಗೆ ಬಿಗ್ ಸ್ಕ್ರೀನ್‌ನಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.
ಕೆಜಿಪಿ ಫೌಂಡೇಶನ್ ಸಂಸ್ಥಾಪಕ ಶ್ರೀಗಂಧ ಶೇಟ್ ಅವರು ಕ್ರಿಕೆಟ್ ಅಭಿಮಾನಿಗಳಿಗೋಸ್ಕರ, ಬಿಗ್ ಎಲ್‌ಇಡಿ ವಾಲ್ ಅಳವಡಿಸಿದ್ದಕ್ಕೆ ಆರ್‌ಸಿಬಿ ಹಾಗೂ ಜಿಟಿ ನಡುವಿನ ಫೈನಲ್ ಪಂದ್ಯವನ್ನು ಒಟ್ಟಾಗಿ ವೀಕ್ಷಿಸಲು ಯುವಕರು, ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಜನರು ಆಗಮಿಸಿದ್ದರು. ಕೆಸಿಡಿ ಮೈದಾನ ಸಂಪೂರ್ಣವಾಗಿ ಕ್ರಿಕೆಟ್ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ್ದು, ಎಲ್ಲೆಡೆ ಆರ್‌ಸಿಬಿ ಪರ ಘೋಷಣೆಗಳು ಮೊಳಗುತ್ತಿದ್ದವು.. ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರಿಗೆ ಅಭಿಮಾನಿಗಳು ಭರ್ಜರಿ ಬೆಂಬಲ ಸೂಚಿಸುತ್ತಿದ್ದಾರೆ.
ಪಂದ್ಯದ ಪ್ರತಿಯೊಂದು ರೋಚಕ ಕ್ಷಣವನ್ನು ಬಿಗ್ ಸ್ಕ್ರೀನ್‌ನಲ್ಲಿ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳು ಸಂಭ್ರಮದಲ್ಲಿ ತೇಲುತ್ತಿದ್ದಾರೆ.
ನಂತರ IPL ದಲ್ಲಿ ನಮ್ಮ ಆರ್‌ಸಿಬಿ ಜಯಗಳಿಸಿದ್ದೇ ತಡ, ವಿರಾಟ್ ಕೊಹ್ಲಿ ಮತ್ತು ಶ್ರೀಗಂಧ ಶೇಟ್ ಅವರ ಇರುವ ಬ್ಯಾನರ್ ಹಿಡಿದು ಯುವಕರು ಸಂಭ್ರಮಿಸಿದರು. ಒಟ್ಟಾರೆ ಧಾರವಾಡದ ಕೆಸಿಡಿ ಮೈದಾನ ಐಪಿಎಲ್ ಫೈನಲ್ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/06/2026 01:15 pm