ಪೆಟ್ರೋಲ್ ದರ ಏರಿಕೆ ವಿಚಾರ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದು ಕೇಂದ್ರ ಸರ್ಕಾರ ದರ ಏರಿಸೋದು, ನಾವು ಕಡಿಮೆ ಮಾಡೋದಾ.?
ಮನಮೋಹನ್ ಸಿಂಗ್ ಇದ್ದಾಗ ಪೆಟ್ರೋಲ್ ಎಪ್ಪತ್ತು, ಡೀಸೆಲ್ ನಲವತ್ತೊಂಬತ್ತು ಇತ್ತು.
ಗ್ಯಾಸ್ 450 ಇತ್ತು ಈಗ ಎಷ್ಟು ಆಗಿದೆ.? ಯಾರು ಜಾಸ್ತಿ ಮಾಡಿದ್ದು.? ತೆರಿಗೆ ಕಡಿಮೆ ಮಾಡಿ ಅಂತ ನೀವು ಅವರನ್ನು ಕೇಳೋದೇ ಇಲ್ಲ.? ಅಂತ ಗುಡುಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಾರಣ ರಾಜ್ಯದ ಸೆಸ್ ಕಡಿಮೆ ಮಾಡುವ ವಿಚಾರ, ಅವರಿಗೆ ಬೆಲೆ ಏರಿಸಿದ್ದರೂ ನೀವು ಏನು ಮಾತನಾಡುವುದಿಲ್ಲ. ರಾಜ್ಯದಲ್ಲಿ ಕಡಿಮೆ ಮಾಡ್ತಿರಾ ಅಂತ ಪ್ರಶ್ನೆ ಕೇಳ್ತೀರಾ ಅಷ್ಟೇ.
ಮೋದಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ ಎಷ್ಟಿತ್ತು ಮನಮೋಹನ್ ಸಿಂಗ್ ಇದ್ದಾಗ
ಡೀಸೆಲ್ ಬೆಲೆ 48 ರೂಪಾಯಿ, ಪೆಟ್ರೋಲ್ ಬೆಲೆ 70 ರೂಪಾಯಿ ಇತ್ತು. ಗ್ಯಾಸ್ ಬೆಲೆ 414 ರೂಪಾಯಿ ಇತ್ತು. ಈಗ ಎಷ್ಟಿದೆ, ಈ ಬೆಲೆ ಏರಿಕೆ ಮಾಡಿದ್ದು ಯಾರು? ನೀವು ಯಾಕೆ ಪ್ರಶ್ನೆ ಕೇಳ್ತಾ ಇದ್ದೀರಾ, ಅವರು ಹೆಚ್ಚು ಮಾಡಿದ್ರೆ ನೀವು ಕಡಿಮೆ ಮಾಡಿ ಅಂತಲ್ಲಾ ಯಾಕೆ ಕೇಳುತ್ತೀರಾ ಅಂತ ಕಿಡಿ ಕಾರಿದರು.
PublicNext
21/05/2026 02:24 pm
LOADING...