ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಛತ್ತೀಸ್‌ಗಢ : ಕವರ್ಧಾದಲ್ಲಿ 200 ಬುಡಕಟ್ಟು ಜನರ "ಘರ್ ವಾಪ್ಸಿ' ಸಂಭ್ರಮ - ಶಾಸಕಿಯಿಂದ ಕಾಲು ತೊಳೆದು ಸ್ವಾಗತ

ಛತ್ತೀಸ್‌ಗಢ : ಕವರ್ಧಾ ಜಿಲ್ಲೆಯ ಪಂಡರಿಯಾದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ, ಓರ್ವ ಪಾದ್ರಿಯನ್ನೂ ಒಳಗೊಂಡಂತೆ 200 ಬುಡಕಟ್ಟು ಸಮುದಾಯದ ಸದಸ್ಯರು ತಮ್ಮ ಮೂಲ ಧರ್ಮಕ್ಕೆ ಮರಳಿದ್ದಾರೆ.

ಈ ಸಂದರ್ಭದಲ್ಲಿ, ಬಿಜೆಪಿ ಶಾಸಕಿ ಭಾವನಾ ಬೋಹ್ರಾ ಸಾಂಪ್ರದಾಯಿಕ ಪದ್ಧತಿಗಳು ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಡಕಟ್ಟು ಸಮುದಾಯದ ಜನರನ್ನು ಸ್ವಾಗತಿಸಿ ಗೌರವಿಸಿದರು. ಅವರ ಮೂಲ ಧರ್ಮಕ್ಕೆ ಮರಳುವುದನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ಶಾಸಕಿ ಬೋಹ್ರಾ ಅವರು ಅವರ ಕಾಲುಗಳನ್ನು ತೊಳೆದು ಸನ್ಮಾನಿಸಿದರು.

ಈ ಮುನ್ನವೂ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು. ನೆಯುರ್ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಿಂದ 115 ಬುಡಕಟ್ಟು ಜನರು, ಕುಯಿ-ಕುಕ್ದುರ್ ಪ್ರದೇಶದಿಂದ 70, ದಾಮ್‌ಗಢ ಗ್ರಾಮದಿಂದ 50 ಹಾಗೂ ಕುಲ್ಹಿದೋಂಗ್ರಿ ಗ್ರಾಮದಿಂದ 140 ಜನರು ತಮ್ಮ ಮೂಲ ಧರ್ಮಕ್ಕೆ ಮರಳಿದ್ದರು. ಇದುವರೆಗೆ, ಒಟ್ಟಾರೆ 700 ಕ್ಕೂ ಹೆಚ್ಚು ಬುಡಕಟ್ಟು ಸಮುದಾಯದ ಸದಸ್ಯರು ಮೂಲ ಧರ್ಮಕ್ಕೆ ಮರಳಿರುವುದು ಗಮನಾರ್ಹ.

Edited By : Abhishek Kamoji
PublicNext

PublicNext

21/05/2026 08:25 pm

Cinque Terre

28.25 K

Cinque Terre

2

ಸಂಬಂಧಿತ ಸುದ್ದಿ