ಶಿರಸಿ: ನಗರದಲ್ಲಿ ಈಗಾಗಲೇ 80% ಕಾಮಗಾರಿ ಮುಗಿದಿದೆ, ಇನ್ನುಳಿದ ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ, ಮಳೆ ಬರುವುದರೊಳಗಾಗಿ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಶಿರಸಿ ಜನತೆಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಈ ವರ್ಷ ಉಲ್ಬಣವಾಗಿಲ್ಲ. ಮೊನ್ನೆ ಮಳೆ ಬಂದಿರುವ ಕಾರಣ ಕೆಂಗ್ರೆ ಹೊಳೆಯಲ್ಲಿ ನೀರಿದೆ, ಅದನ್ನು ಹೊರತುಪಡಿಸಿ ನಗರಿ ಸಭೆಯಿಂದ 23 ಬೋರು ಹೊಡೆಸಲಾಗಿದೆ. ಆ 23 ಬೋರುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ನೀರಿನ ತೊಂದರೆ ಆಗುವುದಿಲ್ಲ, ಅದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
Kshetra Samachara
22/05/2026 04:39 pm
LOADING...