ಹುಬ್ಬಳ್ಳಿ: ವೈದ್ಯರನ್ನು ದೇವರ ರೂಪ ಎಂದು ಕರೆಯುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗದಗ ಮೂಲದ ವೈದ್ಧೆಯೊಬ್ಬರು ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ, ತಮ್ಮ ಜೀವ ಉಳಿಸಿದ ವೈದ್ಯರಿಗೆ ವಿಶೇಷ ಉಡುಗೊರೆ ನೀಡಿ ಕೃತಜ್ಞತೆ ಸಲ್ಲಿಸಿದ ಮನಮುಟ್ಟುವ ಘಟನೆ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು,,, ಗದಗ ಮೂಲದ ವಿಜಯಲಕ್ಷ್ಮಿ ನಾರಾಯಣರಾವ್ ಕುಲಕರ್ಣಿ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆತಂಕದ ನಡುವೆಯೇ ಅವರು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಶ್ರೀದರ್ ದಂಡಪ್ಪನ್ನವರ ಅವರ ವೈದ್ಯರ ತಂಡ ಸೂಕ್ತ ಚಿಕಿತ್ಸೆ ಹಾಗೂ ಆರೈಕೆಯಿಂದ ಅಜ್ಜಿ ಸಂಪೂರ್ಣ ಗುಣಮುಖರಾಗಿದ್ದಾರೆ.
ಚಿಕಿತ್ಸೆ ಬಳಿಕ ಆಸ್ಪತ್ರೆಗೆ ಮತ್ತೆ ಭೇಟಿ ನೀಡಿದ ವಿಜಯಲಕ್ಷ್ಮಿ ಅವರು, ತಮ್ಮ ಜೀವನಕ್ಕೆ ಹೊಸ ಬೆಳಕು ನೀಡಿದ ವೈದ್ಯರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದರು. ವೈದ್ಯರ ಸೇವೆಯನ್ನು ಸ್ಮರಿಸಿ ಭಾವುಕರಾದ ಅಜ್ಜಿ, “ವೈದ್ಯರ ಸೇವೆಯಿಂದ ನನಗೆ ಹೊಸ ಜೀವನ ಸಿಕ್ಕಿದೆ” ಎಂದು ಸಂತಸ ವ್ಯಕ್ತಪಡಿಸಿದರು. ಕ್ಯಾನ್ಸರ್ ನಂತಹ ಮಾರಕ ಬಂದಾಗ ಅಜ್ಜಿ ತುಂಬಾ ಭಯಪಟ್ಟಿದ್ದರು. ಆದರೆ ಡಾಕ್ಟರ್ ಧೈರ್ಯ ತುಂಬಿ ಚಿಕಿತ್ಸೆ ನೀಡಿದರು. ಈಗ ಅಜ್ಜಿ ಆರೋಗ್ಯವಾಗಿದ್ದಾರೆ. ವೈದ್ಯರ ಸೇವೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅಜ್ಜಿಯ ಕುಟುಂಬಸ್ಥರು ಕೈ ಮುಗಿದಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ಮಾತ್ರವಲ್ಲ, ಹೊಸ ಬದುಕಿನ ಭರವಸೆ ನೀಡುವ ವೈದ್ಯರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/05/2026 02:07 pm
LOADING...