ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳದಲ್ಲಿ ಧಾರ್ಮಿಕ ಕಟ್ಟೆ ವಿವಾದ: ಪೊಲೀಸರ ಮೇಲೆ ಹಲ್ಲೆ!

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಿಂದೂ ಧರ್ಮದ ಧಾರ್ಮಿಕ ಮೂಲಕಟ್ಟೆಯ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಭುಗಿಲೆದ್ದಿದೆ.

ಈ ವಿಚಾರದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯಲ್ಲಿ, ಮೂಲಕಟ್ಟೆಯನ್ನು ಒಡೆಯಲು ಮುಂದಾದ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಭಟ್ಕಳದ ಜಾಗಟೆ ಕಟ್ಟೆ ಪ್ರದೇಶದಲ್ಲಿದ್ದ ಮೂಲಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಯಲ್ಲಿರುವ ಜಾಗದಲ್ಲೇ ಈ ಕಟ್ಟೆಯನ್ನು ಮರು ನಿರ್ಮಾಣ ಮಾಡಲಾಗಿದೆ.

ಈ ಮರು ನಿರ್ಮಾಣಕ್ಕೆ ಮುಸ್ಲಿಂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಟ್ಟೆಯನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದ್ದರು.

ವಿರೋಧದ ನಡುವೆಯೇ, ಏಕಾಏಕಿ ಜಮಾಯಿಸಿದ ಮುಸ್ಲಿಮರ ಗುಂಪೊಂದು ಮೂಲಕಟ್ಟೆಯನ್ನು ಒಡೆಯಲು ಯತ್ನಿಸಿತು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ.

Edited By : Manjunath H D
PublicNext

PublicNext

24/05/2026 09:44 pm

Cinque Terre

17.74 K

Cinque Terre

4

ಸಂಬಂಧಿತ ಸುದ್ದಿ