ಧಾರವಾಡ : ನಗರದ ತಡಸಿನಕೊಪ್ಪದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ನಮ್ಮ ಹೆಮ್ಮೆಯ ಶಶಿಕುಮಾರ್ ಸರ್ ರೌಡಿಗಳಿಗೆ ಕಾವಲಾಗಿ ನಿಂತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ನಿನ್ನೆ ಧಾರವಾಡದ ಹೊರ ವಲಯದ ತಡಸಿನಕೊಪ್ಪದ ಕೃಷಿ ಜಮೀನಿನ ವ್ಯಾಜ್ಯದಲ್ಲಿ ಗುಂಡು ಹಾರಿಸಿ ಅಟ್ಟಹಾಸ ಮೆರೆದ ಫಿಲೋಮಿನಾ ಪೌಲ್‌ನ ಕುಲಪುತ್ರ ಸುಂದರ ಪೌಲ್ ಅಲಿಯಾಸ್ ರಿಯಲ್ ಎಸ್ಟೇಟ್ ರೌಡಿಯನ್ನು in direct ಆಗಿ ಸಮರ್ಥಿಸಿಕೊಂಡರಾ ಕಮಿಷನರ್ ಶಶಿಕುಮಾರ್? ಎನ್ನುವ ಆತಂಕ ಸಾರ್ವಜನಿಕರಲ್ಲಿ ಕಾಡುತ್ತಿದೆ.
ನಿನ್ನೆ ಕಣ್ಣಿಗೆ ಕಾಣುವ ಹಾಗೆ ಗನ್ ಮ್ಯಾನ್ ಕಡೆಯಿಂದ ಗನ್ ಕಿತ್ತಿಕೊಂಡು ಸುಂದರ್ ಪೌಲ್ ಎರಡರಿಂದ ಮೂರು ಸುತ್ತು ಗುಂಡು ಹಾರಿಸುತ್ತಾರೆ ಹಾಗೆ ಅಲ್ಲೇ ಹಿಂಬದಿಯಲ್ಲಿ ನಿಂತ ಇನ್ನೊಬ್ಬ ಸಂಶಯಾಸ್ಪದವಾಗಿ ಚಂದ್ರು ಪೌಲ್ ಇರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಗನ್ ಮ್ಯಾನ್ ಗುಂಡು ಹಾರಿಸಿಲ್ಲ ಎಂದು ಆದರೆ ನಮ್ಮ ಶಶಿಕುಮಾರ್ and team ಗೆ ಎಲ್ಲಿಂದ ಗನ್ ಮ್ಯಾನ್ ಮೇಲೆ ಸಂಶಯ ಬಂತೋ... ನಮಗೆ ಕಾಣಲಾರದ್ದು ಅವರಿಗೇನು ಕಾಣಿಸಿತೋ.... ಯಾಕೆ ಹೀಗೆ ಪ್ರಕರಣವನ್ನು ತಿರುಚಿ... ಯಾರಿಗೆ ಪರೋಕ್ಷವಾಗಿ ಸಹಾಯ ಮಾಡಲು ಹೊರಟಿದೆ... ನಮ್ಮ ಪೊಲೀಸ್ ಇಲಾಖೆ... ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಈ ರೀತಿಯ ಸಮಾಜ ಘಾತಕ ಶಕ್ತಿಗಳಿಗೆ ಬೆಂಬಲ ನೀಡಿದರೆ ಕಾನೂನಿನ ಮೇಲೆ ಸಾರ್ವಜನಿಕರ ನಂಬಿಕೆ ಹೇಗೆ ಉಳಿಯಲು ಸಾಧ್ಯ ಎನ್ನುವುದು ಜನ ಸಾಮಾನ್ಯರ ಪ್ರಶ್ನೆ...
ಅಲ್ಲರೀ... ಪೊಲೀಸ್ ಕಮಿಷನರ್ ಸಾಹೇಬರೇ ನಿಮಗೆ ವಿಡಿಯೋ ಸಾಕ್ಷಿ ಇದ್ದಾಗ್ಯೂ.... ಹೀಗೆ ಯಾಕೆ ಜನರ ಕಣ್ಣಿಗೆ ಮಣ್ಣೆರಚಿ ಕಾನೂನು ಹಾಗೂ ಅಧಿಕಾರದ ದುರುಪಯೋಗ ಮಾಡುತ್ತೀರಿ ಅನ್ನುವುದು ಪಬ್ಲಿಕ್ ಪ್ರಶ್ನೆ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/05/2026 12:45 pm