ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿನಲ್ಲಿ ಸ್ವಚ್ಛತೆ ಕಾಪಾಡಲು ಸ್ಥಳೀಯರ ಆಗ್ರಹ!

ಮೈಸೂರು: ಮೈಸೂರು ಉಸ್ತುವಾರಿ ಸಚಿವರ ತವರು ಕ್ಷೇತ್ರ ತಿ.ನರಸೀಪುರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ನಿಲ್ದಾಣದ ಆವರಣದ ಸುತ್ತ ಎಲ್ಲೆಂದರಲ್ಲಿ ಕಸ ಕಡ್ಡಿ ಹರಡಿದ್ದು ಆಳೆತ್ತರಕ್ಕೆ ಗಿಡ-ಗಂಟಿಗಳು ಬೆಳೆದಿದೆ. ಪ್ರತಿನಿತ್ಯವೂ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯತೆ ಎದುರಾಗಿದೆ.

ಅನೈರ್ಮಲ್ಯ ಬಗ್ಗೆ ಹಲವು ಭಾರಿ ಮನವಿ ಮಾಡಿದ್ರು ಅಧಿಕಾರಿಗಳ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ನಿಲ್ದಾಣ ಸೇರಿದಂತೆ ಪಟ್ಟಣದಾದ್ಯಂತ ಸ್ವಚ್ಚತೆ ಕಾಪಾಡುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

27/05/2026 06:20 pm

Cinque Terre

6.33 K

Cinque Terre

0

ಸಂಬಂಧಿತ ಸುದ್ದಿ