ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಸಿಡಿಲಿಗೆ ಬಲಿಯಾದ ಆದಿವಾಸಿ; ಮರದ ಕೆಳಗೆ ಆಶ್ರಯ ಪಡೆದಿದ್ದಾಗ ದುರಂತ!

​ಮೈಸೂರು: ಮೈಸೂರು ಜಿಲ್ಲೆಯಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಸಿಡಿಲು ಬಡಿತದ ಘಟನೆಗಳಲ್ಲಿ ಓರ್ವ ಆದಿವಾಸಿ ವ್ಯಕ್ತಿ ಮೃತಪಟ್ಟಿದ್ದು, ಹಸು ಕೂಡ ಬಲಿಯಾಗಿದೆ.

​ಹೆಚ್.ಡಿ.ಕೋಟೆ ತಾಲೂಕಿನ ಮಾಳದ ಹಾಡಿ ಗ್ರಾಮದ ನಿವಾಸಿ ಅಪ್ಪಯ್ಯ ಸಿಡಿಲಿಗೆ ಬಲಿಯಾದ ಆದಿವಾಸಿ. ಇಂದು ಮಧ್ಯಾಹ್ನ ಮೇಕೆ ಮೇಯಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿದೆ.

ಮಳೆಯಿಂದ ರಕ್ಷಿಸಿಕೊಳ್ಳಲು ಅಪ್ಪಯ್ಯ ಅವರು ಸಮೀಪದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ದುರದೃಷ್ಟವಶಾತ್ ನೇರವಾಗಿ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಯುತ್ತಿದ್ದ ಹಸು ಸಾವು

ಮೈಸೂರು ಜಿಲ್ಲೆಯ ಮತ್ತೊಂದು ಭಾಗದಲ್ಲಿ ಸಿಡಿಲು ಬಡಿದು ಮೇಯುತ್ತಿದ್ದ ಹಸುವೊಂದು ಸ್ಥಳದಲ್ಲೇ ಜೀವ ಕಳೆದುಕೊಂಡಿದೆ.

Edited By :
Kshetra Samachara

Kshetra Samachara

28/05/2026 08:15 pm

Cinque Terre

5.32 K

Cinque Terre

0

ಸಂಬಂಧಿತ ಸುದ್ದಿ