ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿನಲ್ಲಿ ಪೊಲೀಸರ ಮುಂದೆಯೇ ಆರ್‌ಸಿಬಿ ಅಭಿಮಾನಿಯ ಧಮಾಕಾ ಡ್ಯಾನ್ಸ್!

ಮೈಸೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಧೂಳೀಪಟ ಮಾಡಿ, ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಇಡೀ ದೇಶಾದ್ಯಂತ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತು.

ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಂತೂ ಅಭಿಮಾನಿಗಳ ಕ್ರೇಜ್ ನೆಕ್ಸ್ಟ್ ಲೆವೆಲ್‌ ತಲುಪಿತ್ತು. ಗೆಲುವಿನ ಜೋಶ್‌ನಲ್ಲಿ ಶರ್ಟ್ ಬಿಚ್ಚಿದ ಸೂಪರ್ ಫ್ಯಾನ್ ಒಬ್ಬರು, ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮುಂಭಾಗದಲ್ಲೇ ಯಾವುದೇ ಭಯವಿಲ್ಲದೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಕೆಲ ಹೊತ್ತು ಸುಮ್ಮನಿದ್ದ ಪೊಲೀಸ್‌ ಅಧಿಕಾರಿ ಅರೆಬೆತ್ತಲಾಗಿ ಡ್ಯಾನ್ಸ್‌ ಮಾಡುತ್ತಿದ್ದ ಆರ್‌ಸಿಬಿ ಅಭಿಮಾನಿಗೆ ಲಾಠಿ ಬಿಸಿ ಮುಟ್ಟಿಸಿದ್ದಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Edited By : Vijay Kumar
PublicNext

PublicNext

02/06/2026 11:31 am

Cinque Terre

8.17 K

Cinque Terre

0

ಸಂಬಂಧಿತ ಸುದ್ದಿ