ನಂಜನಗೂಡು: ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದೆ.
ಶಿವರುದ್ರಮ್ಮ (63) ಮೃತ ದುರ್ದೈವಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳೆ ನಾಪತ್ತೆಯಾಗಿ ಐದು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮಹದೇವಪ್ಪ, ರುಕ್ಕಮ್ಮ, ಮಂಜುಳಾ ಬಂಧಿತ ಆರೋಪಿಗಳು. ಮೈಸೂರು ಮೂಲದ ವ್ಯಕ್ತಿಗೆ ಸೇರಿದ ತೋಟದಲ್ಲಿ ಕಸುವಿನಹಳ್ಳಿ ಗ್ರಾಮದ ಮಹದೇವಪ್ಪ ಎಂಬಾತ ವೃದ್ಧೆಯನ್ನು ಆಕೆಯ ಸೀರೆಯಲ್ಲಿಯೇ ಕೈ ಕಾಲುಗಳನ್ನು ಕಟ್ಟಿ ಪಕ್ಕದಲ್ಲಿದ್ದ ಆಳವಾದ ಒಂದು (ಕೊರೆ) ಹಳ್ಳದಲ್ಲಿ ಹೂತು ಹಾಕಿದ್ದೇನೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಪ್ರಥಮ ಹಂತದ ವಿಚಾರಣೆಯಲ್ಲಿ ನಾನು ಒಬ್ಬನೇ ಮಾಡಿರುವುದಾಗಿ ಆರೋಪಿ ಮಹದೇವಪ್ಪ ಒಪ್ಪಿಕೊಂಡಿದ್ದಾನೆ. ವಿಚಾರಣೆ ಮುಂದುವರಿಯುತ್ತೆ ವಿಚಾರಣೆ ಮುಗಿದ ಮೇಲೆ ಇನ್ನಷ್ಟು ಮಾಹಿತಿ ಹೊರ ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
PublicNext
31/05/2026 08:31 am
LOADING...