ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಪಂಚಾಯತಿಯ ತ್ರೈ ಮಾಸಿಕ ಮತ್ತು ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ಸಭೆ ಬುಧವಾರ ಚಾಂತಾರು ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಉಪಸ್ಥಿಯಲ್ಲಿ ಜರುಗಿತು.
ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಇಲಾಖೆ ಹೊರತು ಪಡಿಸಿ 47 ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು , ಮುಖ್ಯವಾಗಿ ಅರಣ್ಯ ಇಲಾಖೆ ಮತ್ತು ಮೆಸ್ಕಾಂ, ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟಿನ ಬಾಗಿಲು ತೆರವು ಮಾಡುವಂತೆ ಮಳೆಗಾಲದ ಮುನ್ನೆಚ್ಚರಿಕೆ ಕುರಿತು ನಾನಾ ಭಾಗದಲ್ಲಿ ಇರುವ ಸಮಸ್ಯೆಗಳು, ನೀರು ಸರಬರಾಜು ವಿತರಣೆಯಲ್ಲಿ ತಾರತಮ್ಯ, ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ, ವಿದ್ಯುತ್ ಬಿಲ್ ಹೆಚ್ಚಳ ಮತ್ತು ಕಂದಾಯ ಇಲಾಖೆಯಲ್ಲಿರುವ ಕೆಲವು ನ್ಯೂನ್ಯತೆ ,ಕೆ ಎಸ್ ಆರ್ ಟಿಸಿ ಬಸ್ ಗ್ರಾಮೀಣ ಭಾಗದಲ್ಲಿ ಬೆಳಗಿನ ಹೊತ್ತು ಶಾಲಾ ಕಾಲೇಜು ಸಮಯದಲ್ಲಿ ಸಂಚರಿಸದೆ ಖಾಸಗಿ ಬಸ್ ನವರೊಂದಿಗೆ ಶಾಮೀಲಾದ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಚ್. ವಿ. ಇಬ್ರಾಹಿಂಪುರ್, ಆಡಳಿತಾಧಿಕಾರಿ ಕ್ಷಮಾ ಪಾಠೀಲ್, ಗ್ರೇಡ್ 2 ತಹಶೀಲ್ದಾರ್ ಅಶೋಕ್ ಭಟ್ ಉಪಸ್ಥಿತರಿದ್ದರು.
PublicNext
28/05/2026 07:14 am
LOADING...