ಪುತ್ತೂರು : ಕೆಲವು ವರ್ಷಗಳಿಂದ ಗೊಂದಲದ ಗೂಡಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆಗೆ ಇದೀಗ ಡಿಜಿಟಲ್ ಸ್ಪರ್ಶ ಸಿಗುತ್ತಿದೆ.
ಜೂನ್ 1ರಿಂದ ಹೊಸ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಹೊಸ ಪರವಾನಗಿ ಹಾಗೂ ನವೀಕರಣ ಅರ್ಜಿಗಳ ಸ್ವೀಕಾರ, ಪರಿಶೀಲನೆ ಮತ್ತು ಟ್ರ್ಯಾಕಿಂಗ್ ಪ್ರಕ್ರಿಯೆ ಸುಲಭ ಹಾಗೂ ಪಾರದರ್ಶಕವಾಗಲಿದೆ.
ಕಳೆದ ಸುಮಾರು 15- 20 ದಿನಗಳ ಲೋಡ್ ಟೆಸ್ಟಿಂಗ್ ನಡೆದ ಬಳಿಕ ಇದೀಗ ಆನ್‌ಲೈನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೋವಿಗೆ ಪರವಾನಗಿ ಅರ್ಜಿ ಸ್ವೀಕಾರ ಮತ್ತು ಪರಿಶೀಲನೆ 60 ದಿನದೊಳಗೆ ಕ್ಲಿಯರ್ ಮಾಡಲಾಗುತ್ತಿದೆ.
ಈ ಪೋರ್ಟಲ್‌ನ ಒಂದು ಲಾಗಿನ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಇನ್ನೊಂದು ಜಿಲ್ಲಾಪೊಲೀಸ್ ಅಧೀಕ್ಷಕರು ಹಾಗೂ ಮತ್ತೊಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳಿ ಇರಲಿದೆ. ಇದನ್ನು ತೆರೆದು ನೋಡಿದಾಗ, ಎಷ್ಟು ಅರ್ಜಿ ಬಂದಿವೆ. ಯಾರಲ್ಲಿ ಬಾಕಿ ಇವೆ ಎಂಬ ಮಾಹಿತಿ ಸಿಗುತ್ತದೆ.
ಕೃಷಿ ರಕ್ಷಣೆಗಾಗಿ ಕೋವಿ ಹೊಂದಿರುವ ಕೃಷಿಕರು ಅವುಗಳ ಪರವಾನಗಿ ನವೀಕರಣ ಆಗಬೇಕಾದರೆ, ಕಾಡು ಪ್ರಾಣಿಗಳಿಂದ ಕೃಷಿ ನಾಶಕ್ಕಾಗಿ ಸರಕಾರದಿಂದ ಪರಿಹಾರ ಪಡೆದ ಬಗ್ಗೆ ದಾಖಲೆ ಸಲ್ಲಿಸಬೇಕು ಎಂಬ ನಿಯಮ ಕಳೆದ ವರ್ಷ ಜಾರಿಗೆ ತಂದಿದ್ದು, ದೊಡ್ಡ ತಲೆನೋವಾಗಿತ್ತು. ಹಲವರಿಗೆ ಜಿಲ್ಲಾಡಳಿತ ಹಿಂಬರಹ ನೀಡಿ, ಪರವಾನಗಿ ನವೀಕರಣ ಅರ್ಜಿ ತಿರಸ್ಕಾರ ಮಾಡಿತ್ತು.
Kshetra Samachara
28/05/2026 11:01 pm
LOADING...