ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತೀಶ ಜಾರಕಿಹೊಳಿ ಉನ್ನತ ಹುದ್ದೆಗೆ ಏರಲಿ: ಲಕ್ಷ್ಮೀ ದೇವಿಗೆ ವಿಶೇಷ ಪೂಜೆ

ಬೆಳಗಾವಿ: ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಉನ್ನತ ಹುದ್ದೆಗೆ ಏರಲಿ ಎಂದು ಆಶಿಸಿ ಗೋಕಾಕ ನಗರದ ಶ್ರೀ ಲಕ್ಷ್ಮೀ ದೇವಿಯ ದೇವಸ್ಥಾನದಲ್ಲಿ ಬೂವಿ ಗಾಡಿವಡ್ಡರ ಸಮಾಜದ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಸಮಾಜದ ಪ್ರಮುಖರು ದೇವಿಗೆ ವಿಶೇಷ ಆರತಿ ನೆರವೇರಿಸಿ, ಸತೀಶ ಜಾರಕಿಹೊಳಿ ಅವರಿಗೆ ಇನ್ನಷ್ಟು ರಾಜಕೀಯ ಶಕ್ತಿ ಹಾಗೂ ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸಿದರು. ಪೂಜೆಯಲ್ಲಿ ಸಮಾಜದ ಹಲವರು ಭಾಗವಹಿಸಿದ್ದರು.

ಲಕ್ಷ್ಮಣ ಗಾಡಿವಡ್ಡರ, ಹಣಮಂತ ಸಾಗರ, ಪವನ ಮಹಾಲಿಂಗಪುರ, ಭರಮಣ್ಣ ಗಾಡಿವಡ್ಡರ, ಶಟ್ಟೆಪ್ಪ ಗಾಡಿವಡ್ಡರ, ಯಲ್ಲಪ್ಪ ಶಿಲ್ಪಿ, ಹಣಮಂತ ಮನೋವಡ್ಡರ, ವಿವೇಕ ಜತ್ತಿ, ರಾಜು ಗಾಡಿವಡ್ಡರ, ಕಲ್ಲೋಲೆಪ್ಪ, ಬಲ್ಲಾಳ್, ಪರಶುರಾಮ ಬಡಿವಡ್ಡರ ಇದ್ದರು.

Edited By : Somashekar
PublicNext

PublicNext

29/05/2026 05:52 pm

Cinque Terre

10.12 K

Cinque Terre

0

ಸಂಬಂಧಿತ ಸುದ್ದಿ