ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮನೆ ಆವರಣದಲ್ಲಿ ಬೃಹತ್ ನಾಗರ!; ಸುರಕ್ಷಿತವಾಗಿ ಸೆರೆ ಹಿಡಿದ ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು

ಮಂಗಳೂರು: ಪೇರಾರ ನಿವಾಸಿ ನಾಗೇಶ್ ಅವರ ಮನೆಯ ಆವರಣದಲ್ಲಿ ಬೃಹತ್ ಗಾತ್ರದ ನಾಗರ ಹಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಆದರೆ, ಸ್ಥಳಕ್ಕೆ ಧಾವಿಸಿದ ಖ್ಯಾತ ಉರಗ ತಜ್ಞ ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡೂರು ಅವರು ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

​ಮನೆಯ ಆವರಣದಲ್ಲಿ ದೈತ್ಯ ನಾಗರ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಮನೆಯವರು ಮತ್ತು ಸ್ಥಳೀಯರು ತಕ್ಷಣವೇ ಇಸ್ಮಾಯಿಲ್ ಅವರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅವರು, ಸ್ಥಳಕ್ಕೆ ಆಗಮಿಸಿ ಅತ್ಯಂತ ಜಾಣ್ಮೆಯಿಂದ ಹಾವನ್ನು ಯಾವುದೇ ಗಾಯಗಳಾಗದಂತೆ ಹಿಡಿದಿದ್ದಾರೆ.

​ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಮಾತು

"ನಾಗರ ಹಾವಿನ ದೋಷ ಎನ್ನುವುದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದವಿಲ್ಲದೆ ಎಲ್ಲರಿಗೂ ಇರುತ್ತದೆ. ಪ್ರಕೃತಿಯ ಈ ಜೀವಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದು ನನ್ನ ಸೇವಾವಧಿಯಲ್ಲಿ ನಾನು ರಕ್ಷಿಸಿದ 426ನೇ ನಾಗರ ಹಾವು ಆಗಿದೆ. ಇದನ್ನು ಸುರಕ್ಷಿತವಾಗಿ ಜನವಸತಿ ಇಲ್ಲದ ದೂರದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಗುವುದು" ಎಂದರು.

​ಇಸ್ಮಾಯಿಲ್ ಅವರು ಹಾವನ್ನು ಹಿಡಿದು ಪ್ರದರ್ಶಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಅವರ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಹಾವು ಮುಕ್ತವಾಗಿ ಕಾಡಿಗೆ ಸೇರುತ್ತಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

Edited By :
Kshetra Samachara

Kshetra Samachara

30/05/2026 09:53 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ