ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ ವಡೇರ ಮಠದಲ್ಲಿ ಜೂನ್ 1ರಿಂದ 12ರವರೆಗೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರ ಮೊಕ್ಕಾಂ

ಭಟ್ಕಳ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಜೂನ್ 1ರಿಂದ 12ರವರೆಗೆ ಭಟ್ಕಳ ಪಟ್ಟಣದ ಶ್ರೀ ವಡೇರ ಮಠದಲ್ಲಿ ಮೊಕ್ಕಾಂ ದಯಪಾಲಿಸಲಿದ್ದಾರೆ ಎಂದು ಮಂಜುನಾಥ ಪ್ರಭು ತಿಳಿಸಿದ್ದಾರೆ.

ಭಾನುವಾರ ವಡೇರ ಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪಲಿಮಾರು ಮಠದ ಗುರುಗಳಿಂದ ಸನ್ಯಾಸ ದೀಕ್ಷೆ ಪಡೆದ ಬಳಿಕ ಶ್ರೀಮದ್ ನಾರಾಯಣ ತೀರ್ಥರು ಕಾಶಿಯಿಂದ ಭಟ್ಕಳಕ್ಕೆ ಆಗಮಿಸಿ 1475ರಲ್ಲಿ ಗೋಕರ್ಣ ಪರ್ತಗಾಳಿಯ ಮೊದಲ ಮಠವನ್ನು ಇಲ್ಲಿ ಸ್ಥಾಪಿಸಿದ್ದರು ಎಂದರು. ಭಟ್ಕಳದ ವಡೇರ ಮಠವು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಮೂಲಮಠವಾಗಿದ್ದು, 550 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಧಿಕ ಮಾಸದ ವಿಶೇಷ ಸಂದರ್ಭದಲ್ಲಿ ಶ್ರೀಗಳ ಮೊಕ್ಕಾಂ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಜೂನ್ 1ರಂದು ಸಂಜೆ 7 ಗಂಟೆಗೆ ಶ್ರೀಗಳ ಆಗಮನ, ಆಶೀರ್ವಚನ, ಮಠದ ದೇವರ ಪೂಜೆ ಹಾಗೂ ಪ್ರಸಾದ ಭೋಜನ ನಡೆಯಲಿದೆ.

ಜೂನ್ 1ರಿಂದ 12ರವರೆಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಸುಪ್ರಭಾತ, ನೈರ್ಮಲ್ಯ ವಿಸರ್ಜನೆ ಹಾಗೂ ಏಕಾದಶಿ ಹೊರತುಪಡಿಸಿ ಶ್ರೀ ಸಂಸ್ಥಾನ ದೇವರಲ್ಲಿ ಅಪೂಪದಾನ ಮತ್ತು ದೀಪದಾನ ಸೇವೆಗಳು ನಡೆಯಲಿವೆ. ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ಹಾಗೂ ಸಂಜೆ ಭಜನೆ ಮತ್ತು ಧಾರ್ಮಿಕ ಸಭೆಗಳು ಜರುಗಲಿವೆ.

ಅಧಿಕ ಮಾಸದ ಅಂಗವಾಗಿ ಜೂನ್ 2ರಿಂದ 8ರವರೆಗೆ ಪ್ರತಿದಿನ ಸಂಜೆ ಭಾಗವತ ಪ್ರವಚನ ನಡೆಯಲಿದೆ. ಜೂನ್ 5ರಂದು ಮಹಿಳಾ ಮಂಡಳಿಯಿಂದ ಲಕ್ಷ ಕುಂಕುಮಾರ್ಚನೆ ಹಾಗೂ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀಗಳಿಂದ ಸಸಿ ವಿತರಣೆ ನಡೆಯಲಿದೆ. ಜೂನ್ 6ರಂದು ಶ್ರೀ ಗೋಪಾಲಕೃಷ್ಣ ದೇವರಿಗೆ ಶತಕಲಶಾಭಿಷೇಕ, ಜೂನ್ 7ರಂದು ರಕ್ತದಾನ ಶಿಬಿರ, ಜೂನ್ 9ರಂದು ಪುರುಷೋತ್ತಮ ಪೂಜೆ ಹಾಗೂ ಬ್ರಾಹ್ಮಣ ಪೂಜೆ, ಜೂನ್ 10ರಂದು ಲಕ್ಷ ತುಳಸಿ ಅರ್ಚನೆ ನಡೆಯಲಿದೆ.

ಜೂನ್ 11ರಂದು ಏಕಾದಶಿ ಅಖಂಡ ಭಜನೆಗೆ ದೀಪ ಪ್ರಜ್ವಲನೆ ನಡೆಯಲಿದ್ದು, ಜೂನ್ 12ರಂದು ದೀಪ ವಿಸರ್ಜನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಶ್ರೀಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಗಣಪತಿ ಪ್ರಭು, ಗಣಪತಿ ಪುತ್ತು ಪ್ರಭು, ರಾಜೇಶ ಕಾಮತ, ಅಚ್ಯುತ್ ಕಾಮತ, ಪ್ರಕಾಶ ಪ್ರಭು, ಕಲ್ಪೇಶ ಪೈ, ಉದಯ ಪೈ, ಕಿರಣ ಶ್ಯಾನಭಾಗ, ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ಪೈ, ರಜನಿ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/05/2026 02:42 pm

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ