ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿಯ ಅವೈಜ್ಞಾನಿಕ ಡಿವೈಡರ್: ಮಕ್ಕಳ ಜೀವಕ್ಕೆ ಕುತ್ತು, ಪೋಷಕರಲ್ಲಿ ಆತಂಕ!

ಶಿರಸಿ: ನಗರದ ಚರ್ಚ್ ರಸ್ತೆಯ ಆವೇ ಮರಿಯ ಶಾಲೆಯ ಎದುರಿನ ರಸ್ತೆಗೆ ಅವೈಜ್ಞಾನಿಕವಾಗಿ ಡಿವೈಡರ್ ಅಳವಡಿಸಲಾಗಿದೆ. ಒಂದು ಕಡೆ ಏಕಪಥ ರಸ್ತೆ ಅತ್ಯಂತ ಕಿರಿದಾಗಿದ್ದು ಇದು ವಾಹನ ಸವಾರರು ಅಪಘಾತಕ್ಕೆ ಒಳಪಡುವ ಅಪಾಯವಿದೆ. ಹಾಗೂ ಶಾಲಾ ಮಕ್ಕಳಿಗೂ ಪ್ರಾಣಕ್ಕೆ ಕುತ್ತು ತರುವ ಸಂಭವವಿದೆ ಎಂದು ಆರೋಪಿಸಿ ನಗರ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ಪಿಡಬ್ಲ್ಯೂಡಿ ಇಂಜಿನಿಯರಿಗೆ ಸರಿಪಡಿಸುವಂತೆ ಒತ್ತಾಯಿಸಿದರು.

ಅದೇ ರೀತಿ ಜೂ ಸರ್ಕಲ್ ವೃತ್ತವೂ ಕೂಡ ಅತ್ಯಂತ ಅಪಾಯಕಾರಿಯಾಗಿದ್ದು ಅಪಘಾತ ವಲಯವಾಗಿ ಮಾರ್ಪಾಡಾಗಿದೆ.

ಆದುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕೂಡಲೇ ಕಾರ್ಯಪ್ರವೃತ್ತರಾಗಿ ಸರಿಪಡಿಸಬೇಕೆಂದು ಆಗ್ರಹಿಸಿದರು

ನಂತರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅರುಣ್ ಡಿ ಅವರನ್ನು ಭೇಟಿಯಾಗಿ

ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೆರ್ , ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮುಖಂಡರಾದ ನಂದನ ಸಾಗರ್, ಶ್ರೀಕಾಂತ ನಾಯ್ಕ, ರಿತೇಶ್ ಕೆ, ರಮಾಕಾಂತ ಭಟ್ ಹಾಗೂ ಇತರರಿದ್ದರು.

Edited By : PublicNext Desk
Kshetra Samachara

Kshetra Samachara

01/06/2026 06:16 pm

Cinque Terre

3.86 K

Cinque Terre

0

ಸಂಬಂಧಿತ ಸುದ್ದಿ