ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖ್ಯಾತ ಉದ್ಯಮಿ ಡಾ. ವಿಎಸ್‌ವಿ ಪ್ರಸಾದ್ ಅವರಿಗೆ Certificate for International Excellence" ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಹುಬ್ಬಳ್ಳಿಯ ಉದ್ಯಮಿ ಹಾಗೂ ಸ್ವರ್ಣಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಹೆಚ್. ವಿ.ಎಸ್.ವಿ. ಪ್ರಸಾದ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಗೌರವ ದೊರೆತಿದೆ. ಭಾರತದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ "Certificate for International Excellence" ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ.

ಗ್ಲೋಬಲ್ ರಿಸರ್ಚ್ ಅಂಡ್ ಫೌಂಡೇಶನ್ ವತಿಯಿಂದ ಡಾ. ಸಿ. ಹೆಚ್. ವಿ. ಎಸ್. ವಿ. ಪ್ರಸಾದ್ ಅವರಿಗೆ "Certificate for International Excellence" ಪ್ರದಾನ ಮಾಡಲಾಗಿದೆ.

ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸ್ವರ್ಣಾ ಗ್ರೂಪ್ ಅನ್ನು ಬಹುಮುಖ ಕೈಗಾರಿಕಾ ಸಂಸ್ಥೆಯಾಗಿ ಬೆಳೆಸಿದ ಸಾಧನೆಗೆ ಈ ಗೌರವ ಲಭಿಸಿದೆ. ಸಮಾಜಮುಖಿ ಕಾರ್ಯಗಳು, ಉದ್ಯೋಗ ಸೃಷ್ಟಿ, ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಾದೇಶಿಕ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನೂ ಪ್ರಶಸ್ತಿ ಪ್ರದಾನ ಸಮಿತಿ ಶ್ಲಾಘಿಸಿದೆ.

ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗಿದ್ದು, ಡಾ. ವಿಎಸ್‌ವಿ ಪ್ರಸಾದ್ ಅವರ ಸಾಧನೆಗೆ ಉದ್ಯಮ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಈ ಗೌರವ ನನ್ನೊಬ್ಬರದ್ದಲ್ಲ, ಸ್ವರ್ಣಾ ಗ್ರೂಪ್‌ನ ಸಂಪೂರ್ಣ ತಂಡದ ಶ್ರಮಕ್ಕೆ ದೊರೆತ ಮಾನ್ಯತೆ" ಎಂದು ಡಾ. ಸಿ.ಹೆಚ್. ವಿ.ಎಸ್.ವಿ. ಪ್ರಸಾದ್ ಹೇಳಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/05/2026 04:54 pm

Cinque Terre

32.07 K

Cinque Terre

0

ಸಂಬಂಧಿತ ಸುದ್ದಿ