ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂದು ಹುಬ್ಬಳ್ಳಿಯ ಐಸಿಎಐ ಭವನದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI)ನ ನೇರ ತೆರಿಗೆಗಳ ಸಮಿತಿ, ಹುಬ್ಬಳ್ಳಿ ಶಾಖೆ (SIRC) ಆಯೋಜಿಸಿದ್ದ 'ಆದಾಯ ತೆರಿಗೆ ಕಾಯ್ದೆ-2025' ಕುರಿತ ಎರಡು ದಿನಗಳ ಸೆಮಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆರ್ಥಿಕ ವ್ಯವಸ್ಥೆ ಬಲವರ್ಧನೆಗೆ ಸುಧಾರಣೆಗಳು
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕ, ಸರಳ ಹಾಗೂ ತಂತ್ರಜ್ಞಾನ ಆಧಾರಿತ ಸುಧಾರಣೆಗಳು, ಮತ್ತು ಅಭಿವೃದ್ಧಿ ಕೇಂದ್ರೀಕೃತ ನೀತಿಗಳ ಮೂಲಕ ದೇಶದ ಆರ್ಥಿಕ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗುತ್ತಿದೆ ಎಂದು ಹೇಳಿದರು.
ಚಾರ್ಟರ್ಡ್ ಅಕೌಂಟೆಂಟ್ಸ್ ವೃತ್ತಿಪರರು ದೇಶದ ಆರ್ಥಿಕ ಶಿಸ್ತು, ತೆರಿಗೆ ಜಾಗೃತಿ ಹಾಗೂ ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ICAI ಹುಬ್ಬಳ್ಳಿ ಶಾಖೆಗೆ ಮೆಚ್ಚುಗೆ
ಐಸಿಎಐ ಹುಬ್ಬಳ್ಳಿ ಶಾಖೆಯು ಉತ್ತರ ಕರ್ನಾಟಕದ ಯುವ ವೃತ್ತಿಪರರಿಗೆ ಗುಣಮಟ್ಟದ ಮಾರ್ಗದರ್ಶನ ಮತ್ತು ಜ್ಞಾನ ಹಂಚಿಕೆಯ ವೇದಿಕೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ.
ಇಂತಹ ಸೆಮಿನಾರ್‌ಗಳು ಹೊಸ ಆರ್ಥಿಕ ನೀತಿಗಳು, ತೆರಿಗೆ ಸುಧಾರಣೆಗಳು ಹಾಗೂ ವೃತ್ತಿಪರ ಸಾಮರ್ಥ್ಯ ವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿವೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಚೆನ್ನೈನ ಐಸಿಎಐ ನೇರ ತೆರಿಗೆಗಳ ಸಮಿತಿ ಕಾರ್ಯದರ್ಶಿಗಳಾದ ಸಿಎ ಪ್ರಮೋದ್ ಹೆಗಡೆ, SIRC ಹುಬ್ಬಳ್ಳಿ ಶಾಖೆಯ ಅಧ್ಯಕ್ಷರಾದ ಸಿಎ ರಿಷಭ್ ಉಪಾಧ್ಯಾಯ, ಕಾರ್ಯದರ್ಶಿಗಳಾದ ಸಿಎ ಅನಂತ್ ನ್ಯಾಮಣ್ಣವರ್ ಹಾಗೂ ಸಂಸ್ಥೆಯ ಇತರ ಪದಾಧಿಕಾರಿಗಳು, ಹಿರಿಯ ಸಿಎ ವೃತ್ತಿಪರರು, ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/05/2026 03:03 pm
LOADING...