ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಎರಡನೇ ಅಂಗನವಾಡಿ ಶಾಲೆ ಕಟ್ಟಡ ಬೇಡವೇ ಬೇಡ - ಸಾರ್ವಜನಿಕರ ಆಗ್ರಹ

ಶಿರಸಿ: ಕಸ್ತೂರಿಬಾ ನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಗಾಗಲೇ ಒಂದು ಅಂಗನವಾಡಿ ಶಾಲೆ ಇದ್ದು , ಹೆಚ್ಚುವರಿಯಾಗಿ ಇನ್ನೊಂದು ಅಂಗನವಾಡಿ ಶಾಲೆಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಪ್ರಾರ್ಥನೆ ಮಾಡಲಿಕ್ಕೆ ಆಟ ಆಡಲಿಕ್ಕೆ ಜಾಗ ಇಲ್ಲದಂತಾಗುತ್ತದೆ ಎಂದು ಅಲ್ಲಿನ ಸ್ಥಳೀಯರು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ಸಿಡಿಪಿಓ ಇಲಾಖೆ ಹಾಗೂ ನಗರಸಭೆಗೆ ಆಗ್ರಹಿಸಿದ್ದಾರೆ.

ಸುಮಾರು ವರ್ಷಗಳಿಂದ ಶಾಲೆಯ ಮುಂದುಗಡೆ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಯಾದಾಗ ರಸ್ತೆಯಲ್ಲಿನ ಗಲೀಜು ಶಾಲಾ ಆವರಣ ಸೇರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಈ ಕೂಡಲೇ ಸ್ಪಂದಿಸಿ ಚರಂಡಿಯನ್ನು ನಿರ್ಮಾಣ ಮಾಡಬೇಕೆಂದು ಎಸ್ ಡಿ ಎಮ್ ಸಿ ಅಧ್ಯಕ್ಷ ಮೀರ್ ಸಾಬ್ ಮಕಾಂದಾರ ಒತ್ತಾಯಿಸಿದರು.

ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವೀಣಾ ಮಡಿವಾಳರ್ ಮಾತನಾಡಿ ಇಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Edited By :
PublicNext

PublicNext

01/06/2026 03:17 pm

Cinque Terre

8.71 K

Cinque Terre

0

ಸಂಬಂಧಿತ ಸುದ್ದಿ